ಝುನೈಫ್ ಕೋಲ್ಪೆ
ಖ್ಯಾತ ಯುವ ಬರಹಗಾರ
ಸಮಸ್ತ ಈ ಹೆಸರು ಮುಸಲ್ಮಾನರ ನರನಾಡಿಯಲ್ಲೂ ಸಂಚಾರ ಮಾಡುತ್ತಿದೆ, ಇದೊಂದು ಸಂಸ್ಥೆ ಯಲ್ಲ ಕಾರ್ಗತ್ತಲ ಯುಗದಲ್ಲಿ ಪ್ರವಾದಿ (ಸ. ಅ ) ಸತ್ಯತೆಯ ಧ್ವನಿಯಾಗಿ ಮೊಳಗಿಸಿದ ಅ ಶಬ್ಧ ಕಂಪನ ಇಂದಿಗೂ ಮುಸ್ಲಿಂರ ಕಿವಿಗೆ ಅಪ್ಪಳಿಸುವಂತೆ ಮಾಡುತ್ತಿರುವ ಆದರ್ಶ ವಾಹಕವಾಗಿದೆ ಬಹುಮಾನ್ಯ ಸಮಸ್ತ. ಪವಿತ್ರ ಇಸ್ಲಾಂನ ಜೀವಾಳವಾಗಿದೆ ಸಮಸ್ತ ವೆಂಬ ಮೂರಕ್ಷರ.
ಚಿಗುರೊಡೆದ ಬೀಜವೊಂದು ಬಿಸಿಲು ಮಳೆಯೇನ್ನದೆ ಬಿರುಗಾಳಿಗೂ ಬಗ್ಗದೆ ಪುಟ್ಟಿದೆದ್ದು ಮರವಾಗಿ ಫಲ ನೀಡಿದರೆ, ಒಂದಿಷ್ಟು ಜನರಿಗೆ ನೆರಳು ನೀಡಿದರೆ ಅದು ರೋಚಕ ಹೆಗ್ಗುರುತಾಗಿರುವುದಾದರೆ ಅದರ ಸಾರ್ಥಕತೆಗೆ ಬೆಲೆ ಕಟ್ಟಲು ಆಗದಿದ್ದರೆ ಇನ್ನು ಒಂದಿಷ್ಟು ನಿಸ್ಕಲ್ಮಷ ಉಲಮಾಗಳು ಒಟ್ಟು ಸೇರಿ ಪವಿತ್ರ ಇಸ್ಲಾಂನ ನೈಜ ಆದರ್ಶವನ್ನು ಕಾಪಾಡಿಕೊಂಡು ಸತತ 100ರ ಸನಿಹ ವರ್ಷಗಳ ಕಾಲ ಚಾರಿತ್ರಿಕ ಸಾಧನೆಯನ್ನು ಮಾಡುತ್ತ ಅಕ್ಷರ ಕ್ರಾಂತಿಯ ಮುಖಮುದ್ರೆಯಾಗಿಸಿ ನೈಜ ಮುಸಲ್ಮಾನರ ಹಾದಿಯಾಗಿ ಬೆಳೆದು ನಿಂತ ಸಮಸ್ತ ಎಂಬ ಮಹಾ ವೃಕ್ಷದ ಕುರಿತು ಅದರ ನವೋದ್ದಾನ ಕ್ರಾಂತಿ ಕುರಿತು ಅದೆಷ್ಟು ಬಣ್ಣಿಸಿದರು ಅದು ಒಂದು ಹನಿಯಷ್ಟೇ ಸಮ.. ಸಮಸ್ತ ವೆಂದರೆ ಆಳ ಸಮುದ್ರ.. ಅದರ ಅಲೆಯನ್ನು ನೋಡಿ ಆನಂದಿಸಬಹುದು ಆದರೆ ಆಳೆಯಲು ಸಾಧ್ಯವಿಲ್ಲಾ.
ಯಾವುದೇ ಒಂದು ಸಂಘಟನೆ ಸ್ಥಾಪಿಸಿದ ಉದ್ದೇಶವು ಒಂದ ತಮಗಾಗಿ ಅಥವಾ ಪ್ರಾಪಂಚಿಕ ಉದ್ದೇಶಗಳು ಮುಖ್ಯವಾಗಿರುತ್ತದೆ.. ಆದರೆ ಇಂತಹ ಎಳ್ಳಷ್ಟೂ ಉದ್ದೇಶ ಬಹುಮಾನ್ಯ ಸ್ಥಾಪನೆಯ ಗುರಿ ಆಗಿರಲಿಲ್ಲ.. ಇಲಾಹನ ನೈಜ ಇಸ್ಲಾಂನ ಆದರ್ಶವನ್ನು ಕಾಪಾಡುವುದು ಮಾತ್ರವಾಗಿತ್ತು ಸಮಸ್ತದ ಉದ್ದೇಶ..ಸ್ವಾತಂತ್ರ್ಯ ಪೂರ್ವದಲ್ಲಿ ಒಂದೆಡೆ ಉಲಮಾಗಳು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಫತ್ವ ಹೊರಡಿಸಿ ಹೋರಾಟ ಮುಂಚೂಣಿಯಲ್ಲಿದ್ದರು.. ಈ ಸಂದರ್ಭದಲ್ಲಿ ಅಂದರೆ 1921 ರ ನಂತರದ ಅವಧಿಯಲ್ಲಿ ವಿದೇಶದಲ್ಲಿ ವ್ಯಾಪಕವಾಗಿ ಬೆಳೆಯಲು ಯತ್ನಿಸಿದ ಕಪಟ ನೂತನವಾದದ ಆಶಯವು ಮಾಲಿಕ್ ದಿನಾರ್ (ರ ಅ ) ಕಾಲಿಟ್ಟ ಅದೇ ಕೇರಳದ ಪುಣ್ಯ ಮಣ್ಣಿಗೆ ಕಾಲಿಟ್ಟಿತು. ಸ್ವತಂತ್ರ ಹೋರಾಟದಲ್ಲಿ ತಟಸ್ಥವಾಗಿ ಇಸ್ಲಾಮಿಕ್ ಶಿಕ್ಷಣ ಪರಿವಿಲ್ಲದ ಮುಗ್ದರು ಇವರ ಸಿದ್ಧಾಂತದ ಆಹಾರವಾಗಿದ್ದರು..ದಿನದಿಂದ ದಿನಕ್ಕೆ ಸಂಖ್ಯಾ ಬಲ ಹೆಚ್ಚಿಸುತ್ತ ಮುಗ್ದರನ್ನು ಬಲೆಗೆ ಬಿಳಿಸುತ್ತ ಕದಂಬಬಾಹು ಚಾಚಿದರು.ಪಾಶ್ಚಿಮಾತ್ಯ ಶೈಲಿಯಲ್ಲಿ ನಡೆಯುತ್ತಿರುವ ಆಧುನೀಕರಣದ ಪ್ರವೃತ್ತಿಗಳೇ ನೈಜ ಇಸ್ಲಾಂ ಎಂದು ತಲೆಗೆ ತುಂಬಿಸಿದರು.. ಇಲ್ಲಿನ ಉಲಮಾಗಳು ಕಾಫಿರ್ ಗಳು.. ಯಾವುದೇ ಝಿಯಾರತ್, ಮೌಲಿದ್ ಇನ್ನಿತರ ಮಹಾತ್ಮರು ತಿಳಿಸಿದ ಪುಣ್ಯ ಕರ್ಮವೆಲ್ಲ ಶಿರ್ಕ್ ಎಂದು ಅಚ್ಚೋತ್ತಿದ್ದರು. ಈ ರೀತಿ ಜನರನ್ನು ದಿಕ್ಕು ತಪ್ಪಿಸಲು ಹಲವು ಸಲಫಿ ನಾಯಕರ ಬೋಧನೆ ಚಿಂತನೆಗಳನ್ನು ಆಯ್ದುಕೊಳ್ಳಲಾಯಿತು.. ಮುಖ್ಯವಾಗಿ ಮೊಹಮ್ಮದ್ ಬಿನ್ ಅಬ್ದುಲ್ ವಹಾಬ್ (1702-1793), ರಶೀದ್ ರಿದಾ ಅವರ ಸಲಾಫಿಸಂ (1865-1935),ಮುಹಮ್ಮದ್ ಅಬ್ದುಹ್ (1819-1905), ಜಮಾಲುದ್ದೀನ್ ಅಫ್ಘಾನಿ (1939-1997) ರ ಅಂತಾರಾಷ್ಟ್ರೀಯ -ಇಸ್ಲಾಮಿಸಂ ಮತ್ತು ಉತ್ತರ ಭಾರತದಲ್ಲಿ ತಹ್ರೀಕ್ ಇ-ಮುಜಾಹಿದೀನ್, ತಬ್ಲೀಗ್ ಹಿಂದ್ ಮುಖ್ಯವಾಗಿದ್ದವು.
1922 ರಲ್ಲಿ ಕೊಚ್ಚಿನ್ ಕೊಡುಂಗಲ್ಲೂರಿನಲ್ಲಿ ಕೆ.ಎಂ.ಸೀಥಿ ಸಾಹಿಬ್, ಕೆ.ಎಂ.ಮೌಲವಿ ಮತ್ತು ಇ.ಕೆ.ಮೌಲವಿ ಮುಂತಾದ ನಾಯಕರು ಸ್ಥಾಪಿಸಿದ ಕೇರಳ ಮುಸ್ಲಿಂ ಐಕ್ಯ ಸಂಘಮ್ (ಕೇರಳ ಮುಸ್ಲಿಂ ಏಕತೆ ಸಂಘ ) ಮೂಲಕ ಹೊಸ ಸಂಘಟನೆ ರೂಪ ಗೊಂಡಿತು..ಇದು ವಿವಿಧ ಛಿದ್ರವಾಗಿದ್ದ ನೂತನವಾಗಿ ಒಗ್ಗೂಡುವಂತೆ ಮಾಡಿ ಸಂಘಟಿತವಾಗಿ ಮುಸ್ಲಿಂರನ್ನು ದಿಕ್ಕು ತಪ್ಪಿಸಲು ಮುಂದೆ ಬಂದರು. ಕೇರಳ ಹಾಗೂ ಭಾರತದ ಎಲ್ಲ ಕಡೆ ಇಸ್ಲಾಂ ವಿರುದ್ದವಾದ ಹೊಸ ಆಶಯ ಪ್ರಚಾರ ಪಡಿಸಲು ಪ್ರಾರಂಭಿಸಿದರು ಮೃದು ಧೋರಣೆಯನ್ನು ಮೊದಲು ತೋರಿಸಿ ಕ್ರಮೇಣ ಸಂಘಟನೆಯ ವೇದಿಕೆಯು ಶತಮಾನಗಳಿಂದ ಅವಿರೋಧವಾಗಿ ಅನುಸರಿಸಲ್ಪಟ್ಟ ಸಾಂಪ್ರದಾಯಿಕ ಇಸ್ಲಾಂ ಅನ್ನು ಆಕ್ರಮಣ ಮಾಡಲು ಪ್ರಾರಂಭಿಸಿತು ಮತ್ತು ಪೊನ್ನಾನಿಯ ಮಖ್ದುಮ್ಸ್ ನೇತೃತ್ವದ ಪ್ರಖ್ಯಾತ ವಿದ್ವಾಂಸರರನ್ನು ಟಿಕೀಸಲು ಇವರು ಹೆದರಲಿಲ್ಲ.. ಹಲವು ವರ್ಷಗಳಿಂದ ನಡೆದು ಬಂದ ಇಸ್ಲಾಮಿಕ್ ಸಾಂಸ್ಕೃತಿಕ ಸಂಪ್ರದಾಯಗಳನ್ನು ಶಿರ್ಕ್ ಎಂದು ಘೋಷಿಸಿದರು ಮತ್ತು ಕೇರಳ ಅಲ್ಲದೆ ಮುಸ್ಲಿಮರ ಶತಮಾನಗಳ-ಹಳೆಯ ಪಾಂಡಿತ್ಯಪೂರ್ಣ ಮತ್ತು ಬೌದ್ಧಿಕ ಸಂಪ್ರದಾಯವನ್ನು ಕಟುವಾಗಿ ವಿರೋಧಿಸಿದರು.
ಇದನೆಲ್ಲ ನೋಡುತ್ತಿದ್ದ ಸಾತ್ವಿಕ ಉಲಮಾಗಳು ಪವಿತ್ರ ಇಸ್ಲಾಂ ಆದರ್ಶ ಕಾಪಾಡಲು ಪ್ರವಾದಿ ತಿಳಿಸಿದ ಅಹ್ಲ್ ಸುನ್ನ ಪಥ ಎತ್ತಿ ಹಿಡಿಯಲು ಮುಂದೆ ಬಂದರು ಕೇರಳದ ಇಸ್ಲಾಮಿಕ್ ಸಂಪ್ರದಾಯವನ್ನು ರಕ್ಷಿಸಲು ಮತ್ತು ಮತ್ತು ಇಸ್ಲಾಂ ಕುರಿತ ಹೊಸ ವ್ಯಾಖ್ಯಾನಗಳ ವಿರುದ್ಧ ರಾಜಿ ಇಲ್ಲದ ಚಳವಳಿಯನ್ನು ನಡೆಸಲು ಸಂಘಟಿತರಾಗಬೇಕೆಂದು ಉಲಮಾಗಳು ಭಾವಿಸಿದರು. ‘ವಹಾಬಿ ಸಿದ್ಧಾಂತ’ದ ವಿರುದ್ಧ ಮೌಲಾನಾ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ.ಮ) ಅವರು ಇತರ ಕೆಲವು ವಿದ್ವಾಂಸರೊಂದಿಗೆ, ಶ್ರೇಷ್ಠ ಸೂಫಿಗಳನ್ನು ಸೇರಿಸಿ ಅ ಕಾಲ ಘಟ್ಟದ ಖ್ಯಾತ ಧಾರ್ಮಿಕ ವಿದ್ವಾಂಸರು ಮತ್ತು ಸಯ್ಯದ್ ಕುಟುಂಬದ ಪ್ರಮುಖರಾದ ವರಕ್ಕಲ್ ಸಯ್ಯದ್ ಅಬ್ದುರಹ್ಮಾನ್ ಬ ಅಲವಿ ಮುಲ್ಲಕ್ಕೋಯ ತಂಙಳ್ ಅವರನ್ನು ಭೇಟಿಯಾದರು. , ಧರ್ಮದ ನಿಜವಾದ ಆದರ್ಶವನ್ನು ರಕ್ಷಿಸಲು ಐಕ್ಯತೆಯೊಂದಿಗಿನ ಚಳುವಳಿಯ ಅಗತ್ಯವನ್ನು ಚರ್ಚಿಸಲು ಸೂಕ್ತ ಪರಿಹಾರದ ಬಗ್ಗೆ ಚರ್ಚಿಸಲು ಎಲ್ಲ ಖ್ಯಾತ ವಿದ್ವಾಂಸರ ಸಭೆಯನ್ನು ಕರೆಯುವಂತೆ ತಂಙಳ್ ಸಲಹೆ ನೀಡಿದರು.. ಎಲ್ಲ ಉಲಮಾಗಳು ಒಗ್ಗಟ್ಟಾಗಿ ನೂತನವಾದಿ ಕುತಂತ್ರವಾದನ್ನು ಬುಡಮೇಲುಗೊಳಿಸಲು ಸಂಘಟಿತರಾದರು.
ಜೂನ್ 26, 1926 ರಂದು, ಕ್ಯಾಲಿಕಟ್ ಟೌನ್ ಹಾಲ್‌ನಲ್ಲಿ ದೊಡ್ಡ ಸಮಾವೇಶವನ್ನು ಕರೆಯಲಾಯಿತು, ಅಲ್ಲಿ ವಿವಿಧ ಖ್ಯಾತ ವಿದ್ವಾಂಸರು ಭಾಗವಹಿಸಿದ್ದರು, ಸಯ್ಯದ್ ಶಿಹಾಬುದ್ದೀನ್ ಚೆರುಕುಂಚಿಕ್ಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಸಮಾವೇಶವು ನಡೆಯಿತು. ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಎಂಬ ಮಹಾ ವೃಕ್ಷಕ್ಕೆ ಸಾತ್ವಿಕ ಪಂಡಿತರು ಬೀಜ ಬಿತ್ತಿದರು.ಸಮಸ್ತದ ಪ್ರಥಮ ಅಧ್ಯಕ್ಷರಾಗಿ ವರಕಲ್ ಮುಲ್ಲಕ್ಕೋಯ ತಂಗಳ್ ಅವರನ್ನು ಪ್ರಥಮ ಅಧ್ಯಕ್ಷರಾಗಿ ನೇಮಿಸಲಾಯಿತು. ಜೊತೆಗೆ ಕಾಲ ಶ್ರೇಷ್ಠ 40 ಅವುಲಿಯಾ ಸಮಾನರಾದ ಉಸ್ತಾದರುಗಳು ಸಯ್ಯದುರುಗಳು ಮುಶಾವರದ ಭಾಗವಾದರು.ಯಾವುದೆ ಹಣ ದಾಹ ಇನ್ನಿತರ ಉದ್ದೇಶ ಗುರಿ ಸ್ಥಾಪಿಸುವಾಗ ಸಮಸ್ತಕ್ಕೆ ಇರಲಿಲ್ಲ.ಮುಸ್ಲಿಂ ಸಮುದಾಯದ ನವೋದ್ದಾನ ಒಂದೇ ಸಮಸ್ತದ ಗುರಿ ಆಗಿತ್ತು.ಸಮಸ್ತವನ್ನು ಅಧಿಕೃತವಾಗಿ ನೋಂದಾಯಿಸುವಾಗ ಸಮಸ್ತವು ತನ್ನ ಗುರಿ ಮತ್ತು ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದೆ. ಅವುಗಳನ್ನು ನೋಡುವುದಾದರೆ
(1) ಭಾರತೀಯ ಸಂವಿಧಾನ ಗೌರವಿಸಿ ಭಾರತದ ಅಸ್ಮಿತೆ ಜಾತ್ಯತೀತ ತತ್ವವನ್ನು ಒಪ್ಪಿ ಅಹ್ಲು ಸುನ್ನತ್ ವಲ್-ಜಮಾ’ಅದ ನೈಜ ದೃಷ್ಟಿಕೋನದ ಪ್ರಕಾರ ಇಸ್ಲಾಂ ಧರ್ಮದ ವಿಧಿಗಳು ಮತ್ತು ನಂಬಿಕೆಗಳನ್ನು ಪ್ರಚಾರ ಮಾಡುವುದು ಮತ್ತು ಹರಡುವುದು
(2) ಅಹ್ಲು ಸುನ್ನತ್ ವಲ್-ಜಮಾ’ದ ಆಚರಣೆಗಳು ಮತ್ತು ನಂಬಿಕೆಗಳಿಗೆ ವಿರುದ್ಧವಾದ ಸಂಘಟನೆಗಳು ಮತ್ತು ಅಭಿಯಾನಗಳನ್ನು ಪ್ರಬಲವಾಗಿ ವಿರೋಧಿಸುವುದು. ಅಗತ್ಯ ಬಂದಲ್ಲಿ ಕಾನೂನುಬದ್ಧವಾಗಿ ತಡೆಗಟ್ಟುವುದು
(3) ಮುಸ್ಲಿಂ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಹಕ್ಕುಗಳು ಮತ್ತು ಅಧಿಕಾರಗಳನ್ನು ದೊರೆಯುವಂತೆ ನೋಡಿಕೊಳ್ಳುವುದು ಅದಕ್ಕಾಗಿ ಸದಾ ಜಾಗೃತಿ ಮೂಡಿಸುವುದು
(4) ಧಾರ್ಮಿಕ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಹಾಗೂ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಗೆ ಹೊಂದಿಕೆಯಾಗುವ ಲೌಕಿಕ ಶಿಕ್ಷಣವನ್ನು ನೀಡುವುದು, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು.
(5) ಮೂಢನಂಬಿಕೆಗಳು, ಅರಾಜಕತೆ,ಅನೈತಿಕತೆಯನ್ನು ತೊಡೆದುಹಾಕುವ ಮೂಲಕ ಸಾಮಾನ್ಯವಾಗಿ ಮುಸ್ಲಿಂ ಸಮಾಜದ ಕಲ್ಯಾಣ ಮತ್ತು ಪ್ರಗತಿಗಾಗಿ ನಿರಂತರ ಕೆಲಸ ಮಾಡುವುದು.. ಸದಾ ಮುಸ್ಲಿಂರಿಗೆ ಧ್ವನಿಯಾಗಿ ಇರುವುದು.
ವರಕಲ್ ತಂಙಳ್ ರವರಿಂದ ಪ್ರಾರಂಭಗೊಂಡ ಅ ದಿಟ್ಟ ಹೆಜ್ಜೆ ಸಾಟಿಯಿಲ್ಲದೆ ಸಾಗುತ್ತ ಇಂದು ಜಿಫ್ರಿ ಮುತ್ತುಕೊಯ ತಂಗಳ್ ರವರ ಕೈಯಲ್ಲಿ ಭದ್ರವಾಗಿದೆ.9ದಶಕಗಳು ದಾಟಿ ಸಮಸ್ತ ಶತಮಾನದ ಹೊಸ್ತಿಲಿನಲ್ಲಿದೆ.100 ವಾರ್ಷಿಕೋತ್ಸವದ ಉದ್ಘಾಟನೆ ಸಮ್ಮೇಳನವು ಕರುನಾಡ ರಾಜಧಾನಿ ಸಿಲಿಕಾನ್ ಸಿ ಟಿ ಬೆಂಗಳೂರಿನಲ್ಲಿ ಜನವರಿ 28 ರಂದು ನಡೆಯಿತು. ಮುಲ್ಲಕೊಯ ತಂಙಳ್ ರಿಂದ ಹಿಡಿದು ಮುತ್ತುಕೊಯ ತಂಙಳ್ ರವರೆಗೆ ಆದರ್ಶದಲ್ಲಿ ಎಲ್ಲಷ್ಟು ರಾಜಿ ಇಲ್ಲದೆ ಸಮಸ್ತ ನವೋದ್ದಾನದ ವಿಸ್ಮಯವನ್ನೇ ಸೃಷ್ಟಿಸಿದೆ. ಅವುಗಳಲ್ಲಿ ಮುಖ್ಯವಾದದ್ದು ಅಂದರೆ ಸಮಸ್ತ ತನ್ನ ಕಾರ್ಯಾಚಟುವಟಿಕೆ ವಿಸ್ತರಿಸಲು ಹಲವು ಉಪ ಸಮಿತಿ ರಚಿಸಿದೆ.. ಅವುಗಳು ಊಹಿಸಲಾಗದಷ್ಟು ಸಾಧನೆಯ ಪಥವನ್ನು ಏರಿ ಬಿಟ್ಟಿದೆ.
1951 ರಲ್ಲಿ ಸಮಸ್ತವು ಮದ್ರಸ ಚಳವಳಿಯ ಮುಂದಾಳತ್ವವನ್ನು ವಹಿಸಿ ಮದ್ರಸ ಶಿಕ್ಷಣಕ್ಕೆ ಅಡಿಗಲ್ಲು ಹಾಕಿತು. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮದ್ರಸ ಶಿಕ್ಷಣ ನಿಯಂತ್ರಿಸುತ್ತದೆ.ಪ್ರಸ್ತುತ ಸುಮಾರು 10,900+ ಮದರಸಗಳು,10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 1 ಲಕ್ಷ ಅಧ್ಯಾಪಕರು ಗಳು ಇದ್ದಾರೆ.. ಇದು ಕೇವಲ ಕೇರಳ, ಕರ್ನಾಟಕಕ್ಕೆ ಸೀಮಿತವಲ್ಲ.. ಉತ್ತರ ಭಾರತ, UAE, ಖತಾರ್, ಒಮಾನ್, ಲಂಡನ್ ಇನ್ನು 18 ಅಧಿಕ ದೇಶಗಳಲ್ಲಿ ಸಮಸ್ತ ಅಧೀನ ಮದ್ರಸಗಳು ಇವೆ.1ರಿಂದ 12 ತರಗತಿ ಮದ್ರಸ ಶಿಕ್ಷಣ,ಎಲ್ಲ ತರಗತಿಗೂ ಮದ್ಯ, ವಾರ್ಷಿಕ ಪರೀಕ್ಷೆ, 5,7,10,12 ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವ ಅಚ್ಚುಕಟ್ಟಾದ ಸೂಕ್ಷ್ಮ ವಿಧಾನ,ಮೌಲ್ಯ ಮಾಪನ ಕೇಂದ್ರಗಳು,ಪರೀಕ್ಷಾ ಮೇಲ್ವಿಚಾರಕರು,ಏಕಿಕೃತ ಸರಕಾರಿ ಮಾದರಿ ಅಂತರ್ಜಾಲದಲ್ಲಿ ಫಲಿತಾಂಶ,ಮರು ಮೌಲ್ಯ ಮಾಪನ ಅರ್ಜಿ,ಮರು ಪರೀಕ್ಷೆ.ಇಷ್ಟೆಲ್ಲ ಹಂತವಿದ್ದರೂ ಇದುವೆರೆಗೂ ಪ್ರೆಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ,ಪರೀಕ್ಷೆ ರದ್ದಾಗಲಿಲ್ಲ,ಪರೀಕ್ಷೆ ಮೋಟಕು ಗೊಳ್ಳಲಿಲ್ಲ,ನಮಗೆ ಸಂಬಳ ದೊರೆತಿಲ್ಲ ಎಂದು ಇದುವರೆಗೂ ಯಾವ ಅಧ್ಯಾಪಕನು ಪ್ರತಿಭಟನೆ ಮಾಡಲಿಲ್ಲ,ಅಚ್ಚರಿಯಾದರೂ ಇದು ಸತ್ಯ, ಕೇರಳದ ಸಣ್ಣ ಹಳ್ಳಿಯಿಂದ ಪ್ರಾರಂಭಗೊಂಡು ಜಗತ್ತಿನದ್ಯಂತ ಪ್ರಸರಿಸಿದ ಶ್ರೇಣಿಕೃತ ಮದ್ರಸ ಶಿಕ್ಷಣ ವ್ಯವಸ್ಥೆ..ರಾತ್ರಿ, ಬೆಳಿಗ್ಗೆ ಪಾಳಿಯಲ್ಲಿ ಮದ್ರಸ ಪ್ರಾರಂಭ ಗೊಳ್ಳುವುವ ಫಾತಿಹಾ ಸೂರತಿನ ಅಮರ ಧ್ವನಿಯಿಂದ.. ವಿದ್ಯಾರ್ಥಿಗಳ ಈ ಧ್ವನಿಗೆ ಭದ್ರ ಬುನಾದಿ ಹಾಕಿದ್ದು ಸಮಸ್ತ ಕೇರಳ ಜಂಮಿಯ್ಯತುಲ್ ಉಲಮಾ ಎಂಬ ಹೆಸರಲ್ಲಿ, 1926 ಕೇರಳದ ಬೀಳಲು ಸಿದ್ದವಾಗಿದ್ದ ಸಣ್ಣ ಹಂಚಿನ ಕೋಣೆಯಲ್ಲಿ.. ಪ್ರಾರಂಭಗೊಳಿಸಿದ್ದು ಆಗರ್ಭ ಶ್ರೀಮಂತರಲ್ಲ… ಬಿಳಿ ವಸ್ತ್ರಧಾರಿಗಳಾದ ಉಲಮಾ ಪಂಡಿತರು.. ಪ್ರಾರಂಭಗೊಂಡ ಕ್ಷಣದಿಂದ ಈ ವರೆಗೂ ಯಾವುದೇ ಲೋಪದೋಷವಿಲ್ಲದೆ ಮೊನ್ನೆಡೆಸುತ್ತಿದ್ದಾರೆ.. ವಿದ್ಯಾರ್ಥಿಗಳಿಗೆ ಧಾರ್ಮಿಕ, ಸಮನ್ವಯ ಶಿಕ್ಷಣ ನೀಡುತ್ತಿದ್ದಾರೆ.. ಸಮಸ್ತ ವೆಂಬ ಉಲಮಾ ಪ್ರಸ್ಥಾನಕ್ಕೆ ಸಾಟಿ ಇಂದು ಜಗತ್ತಿನಲ್ಲಿ ಯಾವುದು ಇಲ್ಲ.. ಜಗತ್ತಿನಲ್ಲಿ ಸರಿಸಾಟಿ ಇಲ್ಲದ ಶಿಕ್ಷಣ ವ್ಯವಸ್ಥೆ ಇದ್ದರೆ ಅದು ಬಹುಮಾನ್ಯ ಸಮಸ್ತದ್ದು ಮಾತ್ರ.ಸಮಸ್ತ ಕೇರಳ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಪ್ರಧಾನ ಕಛೇರಿಯು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಬಳಿ ಚೇಲಾರಿಯಲ್ಲಿ ನೆಲೆಗೊಂಡಿರುವ ‘ಸಮಸ್ತಾಲಯ’ ಆಗಿದೆ.
ಸಮಸ್ತದ ಚಾರಿತ್ರಿಕ ಸಾಧನೆ ನೋಡುವಾಗ ಮುನ್ನೆಲೆಗೆ ಬರುವ ವಿದ್ಯಾರ್ಥಿ ಸಂಘಟನೆಯಾಗಿದೆ SKSSF. ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SKSSF) – ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SKSSF) ಸಮಸ್ತದ ಆದರ್ಶ ನೀತಿ ನಿಯಮಕ್ಕೆ ಬದ್ಧವಾಗಿ ನಡೆಯುತ್ತಿದೆ .1989 ರಲ್ಲಿ ರೂಪುಗೊಂಡ SKSSF 35ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 2024 ಪೆಬ್ರವರಿವಲ್ಲಿ ಕೇರಳ ಕಲ್ಲಿಕೋಟೆಯಲ್ಲಿ ನಡೆಯಲಿದೆ.SKSSF ಪ್ರತಿಯೊಂದು ಜಮಾಹತ್ ನಲ್ಲಿ ಯುನಿಟ್ ಮಾದರಿಗಳಲ್ಲಿ, ಕ್ಲಸ್ಟರ್, ವಲಯ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸಮಿತಿ ಗಳು ಇವೆ. ನಗರ ಪ್ರದೇಶದಲ್ಲಿ ಚಾಪ್ಟರ್ ಮಾದರಿ ಯಲ್ಲಿ ಕಾರ್ಯಾಚರಿಸುತ್ತದೆ.. ಪಲ್ಲಿದರ್ಸ್ ಅರೇಬಿಕ್ ಕಾಲೇಜುಗಳು, ಸಮನ್ವಯ ಕೇಂದ್ರಗಳಲ್ಲೂ ಕಾರ್ಯನಿರ್ವಹಿಸುತ್ತದೆ. ಸತ್ಯಧಾರ SKSSF ಮುಖವಾಣಿಯಾಗಿದೆ..ಶೈಕ್ಷಣಿಕವಾಗಿ SKSSF ಸಾಧನೆ ನೋಡುವುದಾದರೆ SKSSF ಸಮುದಾಯಕ್ಕೆ ನೀಡಿದ ಉನ್ನತ ಸರಕಾರಿ ಅಧಿಕಾರಿಗಳು (IAS ಒಳಗೊಂಡ ) 20ಕ್ಕೂ ಅಧಿಕ.. ಅದರಲ್ಲಿ ಇಬ್ಬರು ಬೆಂಗಳೂರುನಲ್ಲಿ ಕಾರ್ಯನಿರ್ವಹಿಸುತ್ತ ಇದ್ದಾರೆ.1000+ ಪದವಿ ನಿರತ Phd ತಯಾರಿ ನಡೆಸುತ್ತಿರುವ ವಿದ್ಯಾರ್ಥಿ ತರಬೇತಿದಾರರನ್ನು ಸಮುದಾಯಕ್ಕೆ ನೀಡಿದೆ ಅಲ್ಲದೆ SKSSF TRB, TBC, ಟ್ರೆಂಡ್ ನ್ಯಾಷನಲ್ ಫೆಲೋ ಸಮುದಾಯಕ್ಕೆ ನೀಡಿದೆ. ಅವರು ವಿವಿಧ ಕಡೆ ವಿದ್ಯಾರ್ಥಿ ತರಬೇತಿ ನೀಡಿ ಶೈಕ್ಷಣಿಕವಾಗಿ ಮುನ್ನೆಲೆಗೆ ತರುತ್ತಿದ್ದಾರೆ.SKSSF ಎಜು ಕೇರ್ ಫಂಡ್ ಮೂಲಕ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ನೀಡುತ್ತಿದೆ,ಕ್ಯಾಂಪಸ್ ವಿದ್ಯಾರ್ಥಿಗಳ ನಿಯಂತ್ರಣಕ್ಕೆ ವರ್ಷಕ್ಕೆ ವಿವಿಧ ಕ್ಯಾಂಪಸ್ ಭೇಟಿ, ಮಹಿಳಾ ವಿದ್ಯಾರ್ಥಿನಿಯರಿಗೇ ಪೆನ್ ಕ್ವೀನ್ ಅಭಿಯಾನ ಮೂಲಕ ಇಸ್ಲಾಮಿಕ್ ಚೌಕಟ್ಟಿನ ಜಾಗೃತಿ ಮೂಡಿಸುತ್ತಿದ್ದಾರೆ.SKSSF 100ಕ್ಕೂ ಅಧಿಕ (SKIMBV ಜೊತೆಯಾಗಿ )ಅಲ್ ಬೀರ್ರ್ ಸ್ಕೂಲ್ ನಡೆಸುತ್ತಿದೆ.. ಕರ್ನಾಟಕಕ್ಕೂ 10 ಮಿಕ್ಕ ಪುಟಾಣಿ ಸ್ಕೂಲ್,ಅಲ್ ಬಿರ್ರ್ ಹೈಯರಿ ಸೆಕೆಂಡರಿ ಸ್ಕೂಲ್ ನಡೆಸುತ್ತಿದೆ. ಇದೆಲ್ಲದೆ ಸಮಸ್ತದ ಸ್ಥಾಪಿತ ಉದ್ದೇಶವನ್ನು ಕೂಡ SKSSF ಮರೆತಿಲ್ಲ, SKSSF ನೂತನವಾದ ವಿರುದ್ಧ ನಿರಂತರ ಆದರ್ಶ ಸಮ್ಮೇಳನ ನಡೆಸುತ್ತ ಬರುತ್ತಿದೆ. 10 ಲಕ್ಷ್ಮವಿದ್ಯಾರ್ಥಿಗಳಿಗೆ ಕಲಿಸುವ 1 ಲಕ್ಷ್ಮ ಅಧ್ಯಾಪಕರಿಗೆ ಶಾಖಾ ಹಂತದಲ್ಲಿ MSR ಅಂಗಿಕಾರ ನೀಡುತ್ತಿದೆ,ಮಹಲ್ ಗಳಲ್ಲಿ ನಿರಂತರ ವಿವಿಧ ಕಾರ್ಯಕ್ರಮ, ಮಹಿಳಾ ತರಗತಿ, ವಿವಿಧ ಆದ್ಯಾತ್ಮಿಕ ಸಂಗಮ ನಡೆಸುತ್ತಿದೆ,SKSSF ಮುತ್ತಲಿಮ್ ವಿದ್ಯಾರ್ಥಿ ಬೇಕು ಬೇಡಗಳಿಗೆ ಧ್ವನಿಯಾಗಿ ಆದರ್ಶವಾಗಿ ತ್ವಲಬ ಎಂಬ ಉಪ ಸಮಿತಿ ಕಾರ್ಯಚಿಸುತ್ತಿದೆ.SKSSF ಉಸ್ತಾದರುಗಳಿಗೆ ಮನೆ ನಿರ್ಮಾಣ, ಸಂತ್ವಾನ ಯೋಜನೆ ನೀಡುತ್ತಿದೆ.
SKSSF 1 ಲಕ್ಷ್ಮ ಸೇವಾ ನಿರತ ವಿಖಾಯ ತರಬೇತಿ ದಾರರನ್ನು ಸಜ್ಜುಗೊಳಿಸಿದೆ..ಅವುಗಳಲ್ಲಿ 10 ಸಾವಿರಕ್ಕೂ ಅಧಿಕ ತುರ್ತು ಪರಿಸ್ಥಿತಿ ತಂಡ ಇದೆ.. 24*7 ಸೇವಾ ತಂಡವದು. ಈ ವರ್ಷ ವಿಜಿಲೆಂಟ್ ವಿಖಾಯ ಎಂಬ ಹೊಸ ಪದ್ಧತಿ ಅನುಷ್ಠಾನಗೊಳ್ಳಲಿದೆ.ನಿರಂತರ ಶ್ರಮದಾನ, ಪ್ರಳಯ, ಮಳೆ,ಕೋರೋಣ ವರಿಯರ್ಸ್ ಆಗಿ ವಿಖಾಯ ಸೇವೆ ಸಲ್ಲಿಸಿದೆ.. ಕೇರಳ ರಾಜ್ಯ ಪಾಲ ಭವನದಲ್ಲಿ, ಕೇರಳ ಮಾಧ್ಯಮ ಒಕ್ಕೂಟ ನೀಡುವ ಬಹುಮಾನ ಸ್ವೀಕರಿಸಿದೆ. ಸಹಚಾರಿ ವರ್ಷಕ್ಕೆ ಲಕ್ಷಾಂತರ ರೋಗಿಗಳಿಗೆ ಆರ್ಥಿಕ ರೂಪದಲ್ಲಿ ಸಹಾಯ ಹಸ್ತವನ್ನು ನೀಡುತ್ತಿದೆ ಅದನ್ನು ಶಾಖೆಯ ಸಮಿತಿಯಲ್ಲಿ ಅರ್ಜಿ ಹಾಕಿ ಪಡೆಯಬಹುದು.ಸಾವಿರಾರು ಆಂಬುಲೆನ್ಸ್, ಮಲ್ಟಿ ಸ್ಪೆಷಲಲಿಟಿ ಸಹಚಾರಿ ಹಾಸ್ಪಿಟಲ್ ನಿರ್ಮಿಸಿದೆ.
ವಿಖಾಯ ರಕ್ತದಾನಿ ಬಳಗ ಅಂತ ನಿರಂತರ ರಕ್ತದಾನ ಮಾಡುವ ವಿಭಾಗವೂ ಇದೆ,ಮಿಮ್ ಎಂಬ ಉಪ ಸಮಿತಿ ವೃತ್ತಿಪರ ವೈದ್ಯರ ತಂಡ ಕಾರ್ಯಚಿಸುತ್ತಿದೆ.ವರ್ಷದಲ್ಲಿ ಮಾನವ ಸರಪಳಿ, ಸೌಹಾರ್ದ ಸಮಾವೇಶ, ಫ್ರಿಡಂ ಸ್ವೇರ್, ಸೆಮಿನಾರ್ ನಡೆಸುತ್ತಿದೆ ಇದು ಜಾತ್ಯತೀತ ಸೌಹಾರ್ದತೆಗಾಗಿ.ಮದ್ರಸದಿಂದ ರಾಜ್ಯ ಮಟ್ಟದ ವರೆಗೆ ವಿದ್ಯಾರ್ಥಿಗಳನ್ನು ಸರ್ಗಲಯ ಕಲೋತ್ಸವ ಮೂಲಕ ಗುರುತಿಸುತ್ತಿದೆ.UAE, ಸೌದಿ ಅರೇಬಿಯಾ, ಲಂಡನ್, ಕತಾರ್, ಈಜಿಪ್ಟ್, USA, ಇನ್ನಿತರ ದೇಶದಲ್ಲಿ SKSSF ಶ್ರಮಿಸುತ್ತಿದೆ.. ಇದು ಅಂತರಾಷ್ಟ್ರಿಯ ಅನಿವಾಸಿ ಮಿತ್ರರಿಗಾಗಿ ಕಾರ್ಯಾಚರಣೆ ಮಾಡುತ್ತದೆ.ಧಾರ್ಮಿಕತೆಯ ಸಂದೇಶ ಪ್ರಸರಿಸಲು SKSSF ಇಬಾದ್,ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸಲು SKSSF ಟ್ರೆಂಡ್,ಸಾಮಾಜಿಕ ಜಾಲತಾಣದಲ್ಲಿ SKSSF ಮೀಡಿಯಾ ವಿಂಗ್,ಬರಹದಲ್ಲಿ ಆಸಕ್ತಿ ಇರುವವರಿಗೆ SKSSF ರೈಟರ್ಸ್ ಫಾರಂ,ಭಾಷಣದಲ್ಲಿ ನುರಿತರಿಗೆ SKSSF ಸ್ಪೀಕಾರ್ಸ್ ಫಾರಂ,ಮುಖ್ಯವಾಗಿ ಅಹ್ಲ್ ಸುನ್ನದ ಆದರ್ಶ ಎದೆಗಪ್ಪಿದ ಉಲಮಾಗಳು ಹಾಕಿಕೊಟ್ಟ ಗೆರೆಯನ್ನು ದಾಟದ ಸನ್ನಡತೆಯ ಒಂದು ಸಮೂಹವನ್ನು ಸೃಷ್ಟಿಸುತ್ತಿದೆ SKSSF.
ಸಮಸ್ತ ಕೇರಳ ಸುನ್ನಿ ಬಾಲ ವೇದಿಕೆ (SKSBV) – ಪುಟಾಣಿಗಳಿಗಾಗಿ ಸಮಸ್ತ ರೂಪಿಸಿದ ಸಂಘಟನೆಯಾಗಿದೆ. ಮದರಸ ಹಂತದಲ್ಲಿ ಈ ಸಮಿತಿಯು ಕಾರ್ಯಾಚರಿಸುತ್ತದೆ.ಪ್ರೌಢಶಾಲಾ ಹಂತದವರೆಗಿನ ಮಕ್ಕಳಿಂದ ಇದು ನಡೆಸಲ್ಪಡುತ್ತದೆ.. ಅಧ್ಯಕ್ಷ, ಕಾರ್ಯದರ್ಶಿ ಸಹಿತ ಮದ್ರಸ ಮಟ್ಟದಲ್ಲಿ ವಿದ್ಯಾರ್ಥಿಗಳ ಸಮಿತಿ ರಚಿಸಿ ಬಾಲ್ಯದಲ್ಲಿಯೇ ನಾಯಕತ್ವ ಗುಣ ಬೆಳೆಸಲಾಗುತ್ತದೆ.ವಿವಿಧ ಕಲಾತ್ಮಕ ಚಟುವಟಿಕೆಗಳು SKSBV ಅಧೀನದಲ್ಲಿ ನಡೆಯುತ್ತದೆ.ಕುರುನ್ನುಗಳ್ ಎಂಬ ಆಕರ್ಷಣೆಯ ಮಾಸಿಕ ಪುಸ್ತಕವು ಕೂಡ SKSBV ಪುಟಾಣಿಗಳಿಗೆ ಸಮಸ್ತ ಬಿಡುಗಡೆಗೊಳಿಸುತ್ತದೆ.
ಸಮಸ್ತ ಕೇರಳ ಜಮೀಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ (SKJMCC) – ಇದು ಮದ್ರಸಾ ಶಿಕ್ಷಕರ ಸಂಘಟನೆಯಾಗಿದೆ. ಕೇರಳ, ಕರ್ನಾಟಕ ಹಾಗೂ ಜಾಗತಿಕವಾಗಿ ಈ ಸಂಸ್ಥೆಯ ಅಡಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮದರಸ ಅಧ್ಯಾಪಕರು ನೋಂದಣಿ ಮಾಡಿದ್ದಾರೆ.ವರ್ಷಕ್ಕೆ ನೂರಾರು ಉಸ್ತಾದರಿಗೆ ಕ್ಷೇಮ ನಿಧಿಯಿಂದ ಕೇರಳ ಕರ್ನಾಟಕ ಸಹಿತ ಮನೆ ನಿರ್ಮಾಣ, ಮನೆ ದುರಸ್ಥಿ, ಅರೋಗ್ಯ ಸಹಾಯ ಧನ ಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ.. ಉಸ್ತಾದರುಗಳ ಎಲ್ಲ ಕುಂದುಕೊರತೆಗಳಿಗೆ ಧ್ವನಿಯಾಗಿ ಸಮಸ್ತ ಆದರ್ಶ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ.
ಸುನ್ನಿ ಮಹಲ್ಲಾ ಫೆಡರೇಶನ್ (SMF) ಇದು ಸುನ್ನಿ ಮಹಲ್ಲಾವನ್ನು ಸಂಘಟಿಸುವ ಗುರಿಯನ್ನು ಹೊಂದಿರುವ ಸಮಸ್ತದ ಉಪ ಸಮಿತಿಯಾಗಿದೆ.ಪ್ರಧಾನ ಕಛೇರಿಯು ಮಲಪ್ಪುರಂ ಸುನ್ನಿ ಮಹಲ್‌ನಲ್ಲಿದೆ.ಒಂದು ಮಹಲ್ ಹೇಗಿರಬೇಕು ಅಲ್ಲಿನ ನಾಯಕರು ಹೇಗಿರಬೇಕು ಎಂಬುದನ್ನು ಸಮಸ್ತ ಸೂಚನೆಗಳನ್ನು ನೀಡುತ್ತದೆ.. ಅದನ್ನು SMF ಪಾಲಿಸುತ್ತದೆ..ನೂತನ ವಾದ ವಿರುದ್ಧ ಶೈಕ್ಷಣಿಕ ಕ್ರಾಂತಿ ಕಹಳೆ ಮಹಲ್ ಹಂತದಲ್ಲಿಯೇ ಪ್ರಾರಂಭಿಸಲು ಇದು ಸಹಕಾರಿಯಾಗಿದೆ.
ಸಮಸ್ತ ಕೇರಳ ಮದ್ರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (SKMMA) ಇದು ಸಮಸ್ತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮದ್ರಸಗಳ ಮೇಲ್ವಿಚಾರಣೆಯನ್ನು ಇದು ಮಾಡುತ್ತದೆ.ಮದ್ರಸಾ ಶಿಕ್ಷಕರು, ಪೋಷಕರು ಮತ್ತು ಆಡಳಿತ ಸಮಿತಿ ನಡುವಿನ ಸಂಬಂಧವನ್ನು ಬಲಪಡಿಸುವುದು, ಧಾರ್ಮಿಕ ಶಿಕ್ಷಣ ಲಭ್ಯವಿಲ್ಲದ ಸ್ಥಳಗಳಲ್ಲಿ ಮದರಸಾಗಳನ್ನು ರಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು, ಹೆಚ್ಚಿನ ಮಾಧ್ಯಮಿಕ ಮದರಸಗಳನ್ನು ಸ್ಥಾಪಿಸುವುದು. ತರಗತಿಗಳು, ಉದ್ಯೋಗ ತರಬೇತಿ ಇತ್ಯಾದಿಗಳನ್ನು ಒದಗಿಸುವ ಮದ್ರಸ ಹಂತದಲ್ಲಿ ಬದಲಾವಣೆ ತರುವುದು, ಹಳೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು,ಇಸ್ಲಾಮಿಕ್ ಶಿಕ್ಷಣಕ್ಕೆ ಉತ್ತೇಜಿಸುವುದು, ಮುಅಲ್ಲಿಮ್ ಕೊರತೆಯನ್ನು ಪರಿಹರಿಸಲು ಏನು ಮಾಡಬಹುದು, ಹೇಗೆ, ಯಾವ ರೀತಿ ಎಂಬುದಕ್ಕೆ ಪರಿಹಾರ ಹುಡುಕುವುದು,ಮುಅಲ್ಲಿಮ್ ಕಾರ್ಯಕ್ಷೇತ್ರದ ಪ್ರಚಾರ ಚಟುವಟಿಕೆಗಳನ್ನು ಕೈಗೊಳ್ಳುವುದು ಮತ್ತು ಕೋರ್ಸ್‌ಗಳು, ಪರೀಕ್ಷೆಗಳು, ತರಬೇತಿ ಇತ್ಯಾದಿಗಳನ್ನು ಉತ್ತೇಜಿಸುವುದು ಮುಖ್ಯವಾಗಿದೆ..
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಖ್ಯಾತ ಉಮಾರ ನಾಯಕರಾಗಿದ್ದ ಬಡವರ ಕಣ್ಮಣಿ ಮರ್ಹೂಂ ನೌಶಾದ್ ಹಾಜಿ ಯವರು ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ದಕ್ಷಿಣ ಕನ್ನಡ ಅಧ್ಯಕ್ಷರಾಗಿದ್ದಾರು.. ಇಂತಹ ಸಾವಿರಾರು ಉಮಾರ ನಾಯಕರನ್ನು SKMMA ಸೃಷ್ಟಿಸುತ್ತಿದೆ. ಒಂದು ಸರಕಾರಿ ವ್ಯವಸ್ಥೆ ಇಷ್ಟು ಅಚ್ಚು ಕಟ್ಟಾದ ವ್ಯವಸ್ಥೆ ಇರುವುದು ಸಂಶಯ.. ಆದರೆ ಸಮಸ್ತಕ್ಕೆ ಅಸಾಧ್ಯವಾದದ್ದು ಯಾವುದು ಇಲ್ಲ.. ಕೇವಲ ಅಲ್ಲಾಹನ ದೀನ್ ಉಳಿಸಬೇಕು ಎಂದು ಹೊರಟ ಉಲಮಾ ದಿಗ್ಗಜರ ಪಯಣ ಹೊಸ ನವೋದ್ದಾನ ಮೇರು ಪರ್ವತವನ್ನೇ ಸೃಷ್ಟಿಸಿದೆ.
ಇದಲ್ಲದೆ ಸಮಸ್ತದ ಇನ್ನು ಹಲವಾರು ಆವೇಶಭರಿತ ಉಪಸಮಿತಿಗಳು ಇವೆ ಸಮಸ್ತ ಕೇರಳ ಸುನ್ನಿ ಯುವ ಜನ ಸಂಘ, ಸಮಸ್ತ ಕೇರಳ ಜಂಯ್ಯತುಲ್ ಖುತುಬ, ಸಮಸ್ತ ಪ್ರವಾಸಿ ಸೆಲ್, ಸಮಸ್ತ ಇಸ್ಲಾಮಿಕ್ ಸೆಂಟರ್, ಮುಅಲ್ಲಿಮ್ ಒಕ್ಕೂಟ, ಮುಅಲ್ಲಿಮ್ ಕ್ಷೇಮ ನಿಧಿ ಸಮಿತಿ, ಜಂಇಯ್ಯತುಲ್ ಮುಫತ್ತಿಶಿನ್ ಮುಂತಾದ ಅನೇಕ ಒಕ್ಕೂಟಗಳು ಸಮಸ್ತದ ಅಧೀನದಲ್ಲಿ ಕಾರ್ಯಾಚರಿಸುತ್ತದೆ.ಸಮಸ್ತವು ಕೇವಲ ನಾಲ್ಕು ಗೋಡೆಯ ಮದ್ಯೆ ಕಾರ್ಯಾಚರಣೆ ಮಾಡುತ್ತಿಲ್ಲ.. ಸಮಸ್ತವೊಂದು ತೆರದ ಪುಸ್ತಕ.. ಸಾತ್ವಿಕ ಉಲಮಾಗಳ ಸಂಗಮವದು.. ಸಮಸ್ತ ಯಶೋಗಾಥೆ ಇಲ್ಲಿಗೆ ಮುಗಿಯಲ್ಲ.. ಸಮಸ್ತಕ್ಕೊಂದು ಅಧಿಕೃತ ಪತ್ರಿಕೆಯಿದೆ.. ಲಕ್ಷಾಂತರ ಓದುಗರು ಇದ್ದಾರೆ.. ಗಲ್ಫ್ ದೇಶದಲ್ಲೂ ಇದರ ಪಬ್ಲಿಕೇಶನ್ ಮುನ್ನೇ ಉದ್ಘಾಟನೆ ಗೊಂಡಿದೆ. ಪತ್ರಿಕೆಯ ಹೆಸರು ಸುಪ್ರಭಾತಂ.. ಇದೊಂದು ಸುಳ್ಳು ಬಿತ್ತುವ ಮಾಧ್ಯಮಗಳಿಗೆ ಸಿಂಹ ಸ್ವಪ್ನವಾಗಿ ಗೋಧಿ ಮೀಡಿಯಾಗಳಿಗೆ ಸೆಡ್ಡು ಹೊಡೆಯುತ್ತ ತನ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತ ಬರುತ್ತಿದೆ.ಸಮಸ್ತಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಲವು ವಿದ್ಯಾ ಸಂಸ್ಥೆಗಳು ಇವೆ.. ಇವುಗಳ ನಿಯಂತ್ರಣ, ಸಿಲೇಬಸ್ ತಯಾರಿಸಲು SNEC (ಸಮಸ್ತ ರಾಷ್ಟ್ರೀಯ ಶೈಕ್ಷಣಿಕ ಸಮಿತಿ )ಎಂಬ ಹೊಸ ಉಪಸಮಿತಿ ಸಮಸ್ತ ಸ್ಥಾಪಿಸಿದೆ. ಇದರ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಮಸ್ತ ವ್ಯಾಪಿಸದ ಕ್ಷೇತ್ರವಿಲ್ಲಾ ಎಂದು ಹೇಳಬಹುದು.
ಉಲಮಾ ಶಿರೋಮಣಿಗಳ, ನಿಷ್ಕಲಂಕತೆ, ಅಲ್ಲಾಹನಲ್ಲಿರುವ ಅಚಂಚಲ ವಿಶ್ವಾಸ ಹಾಗು ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ಪ್ರತಿಫಲವೆಂಬಂತೆ ಕೇರಳ ಮಣ್ಣಿನಲ್ಲಿ ಬೇರೂರಿದ “ಸಮಸ್ತ” ಎಂಬ ಮಹಾನ್ ಸಂಘಟನೆಯು ಪ್ರಪಂಚದ ನಾನ ಬಾಗಗಳಲ್ಲಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ಭಾರತ ದ ನಾನ ಮೂಲೆಗಳಲ್ಲೂ ಎಂದಲ್ಲ ಏಷ್ಯಾ, ಯುರೋಪ್ ಹಾಗು ಅರೇಬಿಯಾದ ರಾಷ್ಟ್ರ ರಾಷ್ಟ್ರಗಳಲ್ಲೂ ಧಾರ್ಮಿಕ, ಸಾಮಾಜಿಕ, ಹಾಗು ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದೆ. ಧಾರ್ಮಿಕ ಮತ್ತು ಭೌತಿಕ ಶಿಕ್ಷಣದ ಸಮನ್ವಯವಾದ ಅತ್ಯಾದುನಿಕವಾದ ಸೌಕರ್ಯಗಳನ್ನೋಳಗೊಂಡ “ದಾರುಲ್ ಹುದಾ ಇಸ್ಲಾಮಿಕ್ ಯುನಿವೆರ್ಸಿಟಿ ಚೆಮ್ಮಾಡ್”, “ಜಾಮಿಯಃ ನೂರಿಯಃ ಅರೇಬಿಯ ಕಾಲೇಜು ಪಟ್ಟಿಕ್ಕಾಡ್ ”, ಸೇರಿದಂತೆ ವಾಫಿ ಸಂವಿಧಾನ ಇಂಗ್ಲಿಷ್ ಮೀಡಿಯಂ ಬೋರ್ಡಿಂಗ್ ಸ್ಕೂಲ್, “MEA ಇಂಜಿನೀಯರಿಂಗ್ ಕಾಲೇಜು”, “ಸಾವಿರಕ್ಕೂ ಮಿಕ್ಕ ಪಲ್ಲಿದರ್ಸ್ ಗಳು, ಮಹಿಳಾ ಶರೀಹತ್ ಕಾಲೇಜು ಗಳು ”, ಸೇರಿದಂತೆ ದೇಶ ವಿದೇಶಗಳಲ್ಲಿ ಹತ್ತು ಸಾವಿರಕ್ಕೂ ಮಿಗಿಲಾದ ವಿಧ್ಯಾ ಸಂಸ್ಥೆಗಳು ಹಾಗು ಲಕ್ಷಕ್ಕೂ ಮಿಗಿಲಾದ ವಿಧ್ಯಾರ್ಥಿವೃಂದವು “ಸಮಸ್ತ”ದ ಅಭಿಮಾನವಾಗಿದೆ.ಸಮಸ್ತ ಮಾಡಿದ ಕ್ರಾಂತಿಗೆ ಹಿಡಿದ ಕೈಗನ್ನಡಿಯಾಗಿದೆ ದಾರುಲ್ ಹುದಾ ಯೂನಿವರ್ಸಿಟಿಯಲ್ಲಿ ಹುದವಿ ಬಿರುದು ಪಡೆದ ಉಸ್ತಾದರು ಹಾದಿಯ ಎಂಬ ಹೆಸರಲ್ಲಿ ಬೆಲೆಕಟ್ಟಲಾಗದ ಅಕ್ಷರ ಕ್ರಾಂತಿಯನ್ನು ಭಾರತ ಮುಕ್ಕು ಮೂಲೆಯಲ್ಲೂ ನಡೆಸುತ್ತಿದ್ದಾರೆ.. ವಿದ್ಯಾಸಂಸ್ಥೆಗಳು ಸ್ಥಾಪಿಸಿ ಉತ್ತರ ಭಾರತದ ಮುಗ್ದ ವಿದ್ಯಾರ್ಥಿಗಳಿಗೆ ಇಸ್ಲಾಂನ ತಳಹದಿ ಹೇಳಿ ಕೊಡುತ್ತಿದ್ದಾರೆ.
ಇಸ್ಲಾಮಿಕ್ ಜ್ಞಾನವಿಲ್ಲದೆ ಸಾಗುತ್ತಿದ್ದ ಠಕೂರರಾ ನಾಡದ ಪಶ್ಚಿಮ ಬಂಗಾಳದಲ್ಲಿ, ಉತ್ತರ ಪ್ರದೇಶದಲ್ಲಿ, ಪಂಜಾಬ್, ಅಸ್ಸಾಂ, ಬಿಹಾರ ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ DHIU ಅಧೀನದ ಸಮಸ್ತ ಕೇಂದ್ರೀಕೃತ ವಿದ್ಯಾ ಸಂಸ್ಥೆಗಳು ಇವೆ.ನಾವು ಮದ್ರಸಗಳಲ್ಲಿ ಪವಿತ್ರ ಕುರ್ ಅನ್, ಇಸ್ಲಾಮಿಕ್ ಕರ್ಮ ಶಾಸ್ತ್ರ, ಚರಿತ್ರೆ ಎಲ್ಲವೂ ಕಲಿಯುತ್ತಿದ್ದಾಗ ನನ್ನದೇ ದೇಶದ ಒಂದು ಭಾಗದ ಬಹುತೇಕ ಮುಸ್ಲಿಂರು ಇಸ್ಲಾಂ ಏನೆಂದು ಅರಿಯುತ್ತಿರಲಿಲ್ಲ… ಇಸ್ಲಾಮಿಕ್ ಆಚರಣೆ ತಿಳಿಯದೆ ಕೇವಲ ನಾಮಧೇಯದಿಂದ ಮಾತ್ರ ಇಸ್ಲಾಂನ್ನು ಪ್ರೀತಿಸಿ ಉಸಿರಾಗಿಸಿ ಜೀವಿಸುತ್ತಿದ್ದರು.ಒಂದು ಕಾಲದಲ್ಲಿ ಸೂಫಿ ಸಂತರ ಮಹಾತ್ಮರ ನಾಡಗಿದ್ದ ಉತ್ತರ ಭಾರತ ಕಾಲ ಚಕ್ರ ಉರುಳುತ್ತ ಮುಸ್ಲಿಂ ಎಂಬ ಹಣೆಪಟ್ಟಿ ಮಾತ್ರ ಉಳಿಸಿಕೊಂಡು ಇಸ್ಲಾಮಿಕ್ ಛಾಯೆಯ ಪ್ರಕಾಶ ಕಳೆದುಕೊಂಡಿದ್ದರು.ಪ್ರವಾದಿ ಜನ್ಮ ದಿನ ಅಥವಾ ಇನ್ನಿತರ ಕಾರ್ಯಕ್ರಮದಲ್ಲಿ ಇಲ್ಲಿನ ಪುಟ್ಟ ಕಂದಮ್ಮಗಳು ವೇದಿಕೆ ಏರುವಾಗ ಪ್ರವಾದಿಯ ಪ್ರಕೀರ್ತನೆ ಹಾಡುವಾಗ ಮತ್ತೊಂದಡೇ ಪ್ರವಾದಿಯು ಅಂತಿಮ ಕ್ಷಣದಲ್ಲಿ ಕಣ್ಣೀರುಟ್ಟು ನೆನಪಿಸಿದ ನಮ್ಮಂತೆಯೆ ಖೈರ್ ಉಮ್ಮಾದಲ್ಲಿದ್ದ ಉತ್ತರ ಭಾರತೀಯ ನವ ಮುಸಲ್ಮಾನರಿಗೆ ಪ್ರವಾದಿಯ ಕುರಿತು ಜ್ಞಾನವೇ ಇರಲಿಲ್ಲ. ಆ ಮುಗ್ಧ ಮನಸ್ಸುಗಳಿಗೆ ಪ್ರವಾದಿಯ ಬಹುತೇಕ ಸಂದೇಶ ತಲುಪಿರಲಿಲ್ಲ.ಅದಕ್ಕೆ ಕಾರಣ ಹಲವು ಇದೆ.ಮದ್ರಸ, ಶಿಕ್ಷಣ ಸಂಸ್ಥೆಯ ಕೊರತೆ,ತೀವ್ರ ಬಡತನ, ಸರಿಯಾದ ಪ್ರಬೋಧಕರ ಅಲಭ್ಯತೆ,ಪ್ರತಿಯೊಂದು ಕಡೆ ಧಾರ್ಮಿಕ ಶಿಕ್ಷಣ ರೂಪಿಸಲು ಒಂದು ನೇತೃತ್ವ ಇಲ್ಲದಿರುವಿಕೆ,ಫ್ಯಾಸಿಸ್ಟ್ ರ ಕುತಂತ್ರ,ಸರ್ಕಾರದ ಕಡೆಗಣನೆ,ನೂತನವಾದಿಗಳ ಲಗ್ಗೆ ಇನ್ನಿತರ ಹಲವು ವಿಚಾರ ಅವರ ಶೈಕ್ಷಣಿಕ ಪಥಕ್ಕೆ ತಡೆಹೊಡ್ದಿತ್ತು.
ಆದರೆ ಕಾಲ ಈಗ ಮುಂಚಿನಂತೆ ಇಲ್ಲ.ಅಲ್ ಹಮ್ದುಲಿಲ್ಲಾಹ್,ಬಹುಮಾನ್ಯ ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ನೇತೃತ್ವ ಉತ್ತರ ಭಾರತದಲ್ಲಿ ಶಿಕ್ಷಣ ಕ್ರಾಂತಿಗೆ ಪಣತೊಟ್ಟಿದೆ. ಸಮಸ್ತದ ಅಧೀನ ಯುನಿವರ್ಸಿಟಿ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಉತ್ತರ ಭಾರತದ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ.ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಜೊತೆಗೆ ನೀಡುತ್ತಾ ಸಮನ್ವಯ ಶಿಕ್ಷಣಕ್ಕೆ ಪ್ರಧಾನ್ಯತೆ ನೀಡಿ ವಿದ್ಯಾರ್ಥಿಗಳನ್ನು ಪ್ರಬುದ್ಧರಾಗಿಸುತ್ತಿದೆ.ಇನ್ನು ಹಲವು ಕಾಲೇಜು,ಅಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ,ಪ್ರಾಥಮಿಕ ಶಿಕ್ಷಣ ಸಂಸ್ಥೆ,ವಯಸ್ಕರ ತರಗತಿ, ಗ್ರಾಮ ಗ್ರಾಮಕ್ಕೆ ಭೇಟಿ,ಮುಂತಾದ ಮಾದರಿ ಕ್ರಮದೊಂದಿಗೆ ಪವಿತ್ರ ಇಸ್ಲಾಮಿನ ಸಂದೇಶ ನಮ್ಮ ಉತ್ತರ ಭಾರತೀಯ ಸಹೋದರರ ಕಾಲ ಬುಡಕ್ಕೆ ಹೋಗಿ ತಲುಪಿಸುತ್ತಿದ್ದಾರೆ. ಅಲ್ಲಿನ ಪುಟ್ಟ ಕಂದಮ್ಮಗಳು ಹುದವಿ ಕೋರ್ಸ್ ಕಲಿಯುತ್ತಿದ್ದಾರೆ. ವಾರ್ಷಿಕವಾಗಿ 5 ಕೋಟಿ ವ್ಯಯಿಸಿ ಉತ್ತರ ಭಾರತೀಯರಿಗೆ ದೀನ್ ಕಲಿಸುತ್ತಿದೆ.
2000ಕ್ಕೂ ಅಧಿಕ ಮದ್ರಸ.. ವಯಸ್ಕ ಶಿಕ್ಷಣ ಪದ್ಧತಿ,500ಕ್ಕೂ ಅಧಿಕ ಸಮಸ್ತ ಅಂಗಿಕೃತ ಮದ್ರಸ ಕಾರ್ಯಚಿಸುತ್ತಿದೆ..ಇದು ಕೇವಲ ಸಮಸ್ತ ಅಧೀನದ ಯೂನಿವರ್ಸಟಿ ದಾರುಲ್ ಹುದಾದ ವಿದ್ಯಾರ್ಥಿಗಳ ಹಾದಿಯ ಶೈಕ್ಷಣಿಕ ಆಂದೋಲನದ ಮದ್ರಸಗಳಷ್ಟೇ…ಇನ್ನು ಹಲವು ವಿದ್ಯಾ ಸಂಸ್ಥೆಗಳ ಉಸ್ತಾದರುಗಳು ಉತ್ತರ ಭಾರತದಲ್ಲಿಯೇ ಠಿಕಾಣಿ ಹೂಡಿ ದಅವಾ ದಲ್ಲಿ ತಲ್ಲಿನರಾಗಿದ್ದಾರೆ. ಒಟ್ಟಿನಲ್ಲಿ ಸಮಸ್ತದ ಉಲಮಾಗಳ ದೀರ್ಘ ದೃಷ್ಟಿ ಸಾಕಾರಗೊಳ್ಳುತ್ತಿದೆ.
ಸಮಸ್ತದ ಚರಿತ್ರೆ ಪುಟ ತೆರದು ನೋಡಿದಾಗ ಇದುವರೆಗೆ ಮುಶವರ ತೆಗೆದುಕೊಂಡ ಒಂದೇ ಒಂದು ತೀರ್ಮಾನ ತಪ್ಪು ಎಂದು ಯಾರಿಗೂ ಸಾಬೀತು ಪಡಿಸಲು ಆಗಿಲ್ಲ.ಎಲ್ಲ ಕಾಲಕ್ಕೂ ಅನ್ವಯವಾಗುವಂತೆ ಸಮಸ್ತ ದೀರ್ಘ ದೃಷ್ಟಿಯಲ್ಲಿ ತೀರ್ಮಾನ ಆದೇಶ ನೀಡುತ್ತದೆ. ಖಾದಿಯಾನಿಗಳು, ತಬ್ಲೀಗ್ ಗಳು, ಕೆಲ ಕಳ್ಳ ತ್ವರಿಕತ್ ಗಳು, ತೀವ್ರಗಾಮಿ ಚಿಂತನೆ ಇರುವ ಸಂಘಟನೆಗಳ ಕುರಿತು ಸಮಸ್ತ ನಿರ್ಭಿತಿಯಿಂದ ತನ್ನ ನಿಲುವು ವ್ಯಕ್ತಪಡಿಸಿದೆ.. ಕಾಲ ತಕ್ಕಂತೆ ಜನರಿಗೆ ಸಮಸ್ತ ಕ್ರಮದ ಮಹತ್ವ ಅರಿವಾಗಿದೆ. ಆದ್ದರಿಂದ ಸಮಸ್ತವನ್ನು ಅಲ್ಲಾಹನ ಅವುಲಿಯಾಗಲು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಬಹುದು.. ಕಾರಣ ಅವರು ಸ್ಥಾಪಿಸಿದ ಸಂಘಟನೆಯೂ ಎಂದು ಎಡವಲು ಅವರು ಸಮ್ಮತಿಸಲ್ಲ.. ಸಮಸ್ತ ಇದುವರೆಗೂ ಒಂದೇ ಒಂದು ದೇಶದ ಹಿತಕ್ಕೆ ಹಾನಿಯಾಗುವ ಚಟುವಟಿಕೆ ನಡೆಸಿಲ್ಲ.. ಪ್ರತಿವರ್ಷವು ಮಾನವ ಸರಪಳಿ, ಪ್ರಿಡಂ ಚೌಕ, ಸೌಹಾರ್ದ ಸಮ್ಮೇಳನ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡುತ್ತಿದೆ.ದೇಶದಲ್ಲಿನ ಅಲ್ಪಸಂಖ್ಯಾತರ ಧ್ವನಿಯಾಗಿದೆ.. ಶರೀಯತ್ ಹೋರಾಟ, ತ್ರಿವಳಿ ತಲಾಕ್ ರದ್ದು ವಿರುದ್ಧ ಹೋರಾಟ, NRC, CAA ಕರಾಳ ಕಾನೂನು ವಿರುದ್ಧ ಹೋರಾಟ, ಕರ್ನಾಟಕ ಹಿಜಾಬ್ ರದ್ದತಿ ವಿರುದ್ಧ ಹೋರಾಟ ಮಾಡಿದೆ ಕೇವಲ ಹೋರಾಟಕ್ಕೆ ಸೀಮಿತವಾಗದೆ ಮುಸ್ಲಿಂರ ಪ್ರತಿನಿಧಿಯಾಗಿ ಸರ್ವೋಚ್ಚ ನ್ಯಾಯಾಲಯ ದಾವೆ ಹೂಡಿ ಕಾನೂನು ಸಮರ ನಡೆಸಿದೆ.1986ಸಂದರ್ಭ ಕೋರ್ಟ್ ಮೆಟ್ಟಿಲೇರಿದ ಶಾಹ್ ಬಾನು ಪ್ರಕರಣ ದೇಶದೆಲ್ಲಡೆ ಸಂಚಲನ ಸೃಷ್ಟಿಸಿತ್ತು.. ಚರ್ಚೆ ಸಂಸತ್ತು ಭವನದೊಳಗು ಲಗ್ಗೆ ಇಟ್ಟಿತು.ಕಾಂಗ್ರೆಸ್ ಸರಕಾರವಾಗಿತ್ತು ಅಂದು ಆಡಳಿತ.. ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸಂಸದರು ಏಕ ಸಿವಿಲ್ ಕೋಡ್ ಬಗ್ಗೆ ಮಾತಿನಲ್ಲಿ ಪ್ರಸ್ತಾಪಿಸಿದರು.ಇಲ್ಲಿ ತರುತ್ತೇವೆ ಎಂದು ಹೇಳಿದಲ್ಲ.. ತಂದರೆ ಹೇಗೆ ಎಂಬ ಮಾತು ಆಡಿದ್ದು ಅಷ್ಟೇ.. ಈ ಸುದ್ಧಿ ಪತ್ರಿಕೆಯಲ್ಲಿ ಬಿತ್ತರವಾಯಿತು.. ಸುದ್ಧಿ ತಿಳಿದ ಅಂದಿದ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೇರಳ ಕರ್ನಾಟಕದ ಮುಸ್ಲಿಂರ ಕೊನೆಯ ಮಾತಗಿದ್ದ ಶಂಸುಲ್ ಉಲಮಾ(ಖ ಸಿ ) ಸುಮ್ಮನೆ ಕೊರಲಿಲ್ಲ.. ಏಕ ಸಿವಿಲ್ ಕೋಡ್ ಎಂದರೇನು.. ಇದರಿಂದಾಗುವ ಪರಿಣಾಮ ಏನು ಎಂಬುದರ ಜಾಗೃತಿ ಊರೂರು ಅಳೆದು ಅಲ್ಲೆಲ್ಲಿ ಸಭೆ ನಡೆಸಿ ರಾಜ್ಯ ದಾಟಿ ಅಲ್ಲಿಯೂ ಮುಸ್ಲಿಂರನ್ನು ಜಾಗೃತಿಗೊಳಿಸಿದರು.. ಅಂದಿನ ಮುಸ್ಲಿಂ ಸಂಸದರು , ರಾಜಕೀಯ ಪಕ್ಷ ನೇತಾರು ಶಂಸುಲ್ ಉಲಮಾರನ್ನು ಭೇಟಿ ಮಾಡಿದರು… ಹೋರಾಟ ತೀವ್ರತೆ ಎಲ್ಲಡೆ ಹೆಚ್ಚಾದಾಗ ಸಂಸತ್ತಿನಲ್ಲಿಯೇ ರಾಜೀವ್ ಗಾಂಧಿ ಹೇಳಿಬಿಟ್ಟರು.. ಏಕ ಸಿವಿಲ್ ಕೋಡ್ ತರುವ ಪ್ರಸ್ತಾಪವೇ ನಮ್ಮಲ್ಲಿ ಇಲ್ಲವೆಂದು.. ಶಂಸುಲ್ ಉಲಮಾ (ಖ ಸಿ ) ಹೋರಾಟ ಶಕ್ತಿ ಅದಾಗಿತ್ತು.. ಸಮಸ್ತ ನೇತೃತ್ವದ ಹೋರಾಟಕ್ಕೆ ಇದು ಸಣ್ಣ ಉದಾಹರಣೆಯಷ್ಟೇ.. ಇಂತಹ ನೂರಾರು ಉದಾಹರಣೆಗಳು ಇವೆ. ಸಮಸ್ತ ನೇತೃತ್ವದ ಉಲಮಾ ಕುರಿತು ಬರೆಯುವುದಾದರೆ ಪುಟಗಳು ಸಾಲದು.. ವರಕಲ್ ತಂಙಳ್ ರವರಿಂದ ಹಿಡಿದು ಇದುವೆರೆಗೆ ಸಮಸ್ತಕ್ಕೆ ನೇತೃತ್ವ ನೀಡುತ್ತಿರುವ ಎಲ್ಲ ಉಲಮಾಗಳು ನಕ್ಷತ್ರ ಸಮಾನರು, ಪಾಂಡಿತ್ಯದ ನಿಧಿಗಳು.ಅವರ ಹಿಂದೆ ಸಾಗುವುದೇ ಅತಿದೊಡ್ಡ ಸೌಭಾಗ್ಯ.
ಎಳ್ಳಷ್ಟೂ ಕೊರತೆ ಸಮಸ್ತ ದಲ್ಲಿ ಇಲ್ಲ.. ಜಗತ್ತಿನಲ್ಲಿ ಸರಿಸಾಟಿ ಇಲ್ಲದಷ್ಟು ಸಮಸ್ತ ಸಾಧನೆ ಮಾಡಿದೆ.ನವೋದ್ದಾನದ 100 ವರ್ಷಗಳು ಪೂರೈಸಲು ಹೊರಟಿದೆ. ಒಂದೊಂದು ವರ್ಷವೂ ಕೂಡ ಸಾವಿರ ವರ್ಷದಲ್ಲಿ ಮುಗಿಸಲು ಸಾಧ್ಯವಿಲ್ಲದ ಕಾರ್ಯಾಚಟುವಟಿಕೆ ಮಾಡಿ ತೋರಿಸಿದೆ.ಸಂಘಟನೆಗಳು ಯಾಕೆ, ಅದರ ಹಿಂದೆ ಹೋಗುವುದು ಯಾಕೆ ಎಂದು ಹಲವರ ವಾದ ಇದರ ಮದ್ಯೆ ತಲೆ ಎತ್ತಿದೆ.ಜಾಗತಿಕವಾಗಿ ಸಂಘಟನೆಗಳಿಗೆ ಬರವಿಲ್ಲಾ..ಸಂಘಟನೆಗಳು ಹಣಬೆಗಳಂತೆ ಅಲ್ಲಲ್ಲಿ ತಲೆಯೆತ್ತಬಹುದು.. ಆದರೆ ಸ್ಥಾಪಿತ ಉದ್ದೇಶದೊಂದಿಗೆ ಒಂದಿಷ್ಟು ಕಳಂಕವಿಲ್ಲದೆ ಐಹಿಕ ಮೋಹವಿಲ್ಲದೆ ಇಲಾಹಿ ಚಿಂತನೆಯೊಂದಿಗೆ ಪ್ರವಾದಿ ಕಲಿಸಿಕೊಟ್ಟ ಪಥದಲ್ಲಿ ಸಾಗಲು ಅಲ್ಲಾಹನ ಅನುಗ್ರಹ ಬೇಕು.. ಇಂತಹ ಅನುಗ್ರಹಿತ ಶಕ್ತಿಯಾಗಿದೆ “ಸಮಸ್ತ ಕೇರಳ ಜಂಯ್ಯತುಲ್ ಉಲಮಾ “ಸಮಸ್ತ ವೆಂಬುದು ಒಂದು ಸಂಘಟನೆಯಲ್ಲ.. ಅದು ಇಸ್ಲಾಂನ ನೈಜ ಪಾರಂಪರ್ಯವಾಗಿದೆ. ಪರಿಪೂರ್ಣ ಮುಸ್ಲಿಂನ ಸಂಕೇತವಾಗಿದೆ ಸಮಸ್ತ.ಈ ಸಂಘಟನೆಯ ಸಣ್ಣ ಭಾಗವಾಗಲು ಮಹಾ ಭಾಗ್ಯವಿರಬೇಕು.. ಅಲ್ಲಾಹನ ನಿಸ್ಕಲ್ಮಷ ದಾಸರಾದ 40 ಅವುಲಿಯಾಗಳು ಅಡಿಪಾಯವಿಟ್ಟ ಸಂಘಟನೆಯಿಂದು 100 ನೇ ವರ್ಷದ ಸನಿಹದಲ್ಲಿದೆ.. ಪ್ರವಾದಿ ಕಲಿಸಿದ ತತ್ವ ಆದರ್ಶ ಎದೆಗಪ್ಪಿ ನೂತನವಾದವನ್ನು ಎಡೆಮುರಿ ಕಟ್ಟಿ ನೈಜ ಮುಸ್ಲಿಂರಾಗಿ ಜೀವಿಸಿ ಪರಲೋಕ ವಿಜಯಕ್ಕಾಗಿ ಸಮಸ್ತ ಉಲಮಾ ನೇತೃತ್ವವು ಶ್ರಮಿಸುತ್ತಿದೆ.ಉಲಮಾಗಳು ಸಂಕಷ್ಟದಲ್ಲಿ ನೂಹ್(ಅ.ಸ)ರಿಗೆ ಇದ್ದ ಹಡಗಿನಂತೆ. ಆ ಹಡಗಿನಲ್ಲಿ ಏರಿದವರು ವಿಜಯಿಗಳು. ಇಂದು ಆ ಹಡಗಿನ ನಾವಿಕ ಶಂಸುಲ್ ಉಲಮಾ( ಖ. ಸಿ )ರ ಶಿಷ್ಯ ಸಯ್ಯಿದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತುಕೊಯ ತಂಗಳ್. ಈ ನೌಕೆ ಆದರ್ಶ ಪರಿಶುದ್ಧತೆಯೊಂದಿಗೆ ಅಂತ್ಯ ದಿನದವರೆಗೂ ಸಾಗಲಿದೆ.ಪತಾಕೆ ಮಹದಿ ಇಮಾಮ ಕೈ ಸೇರಲಿದೆ. ಈ ಒಂದು ಸಂಘಟನೆಯಲ್ಲಿ ಸಣ್ಣ ಭಾಗವಾಗಿ ಕಾರ್ಯಚಿಸಿದರು ನಮ್ಮ ಮರಣ ನಂತರ ಪುಟ್ಟ ಯುನಿಟ್ ನಿಂದ ಹಿಡಿದು ಮಕ್ಕಾ, ಮದೀನಾದ ಪುಣ್ಯ ಮಣ್ಣಿನಲ್ಲೂ ನಮಗಾಗಿ ಪ್ರಾರ್ಥನೆ ಕರ ಮೇಲೇಳುತ್ತದೆ. ಮಿತ್ತಬೈಲ್ ಉಸ್ತಾದ್, ನೌಶಾದ್ ಹಾಜಿ, ಹಾಜಿ ಕೆಂಪಿ ಮುಸ್ತಫಾ ಮುಂತಾದ ಉಲಮಾ, ಉಮಾರ ನಾಯಕ ಜನಝ ಸಂದರ್ಶಿಸಲು ಸೇರಿದ ಜನ ರಾಶಿಯೇ ಇದಕ್ಕೆ ಸ್ಪಷ್ಟ ಉದಾಹರಣೆ.ಅಗ್ರಗಣ್ಯ ಉಲಮಾ ನಾಯಕರು ನಮಗಾಗಿ ಪ್ರಾರ್ಥನೆ ಕರೆ ನೀಡುತ್ತಾರೆ.. ಎಲ್ಲಡೆ ನಮ್ಮ ಮೇಲೆ ಮಯ್ಯತ್ ನಮಝ್, ತಹ್ಲಿಲ್, ಖತಮುಲ್ ಕುರ್ ಆನ್, ನಮ್ಮ ಮೇಲೆ ಸಮರ್ಪಣೆಯಾಗುತ್ತದೆ. ಹಲವು ಕಡೆ ಅನುಸ್ಮರಣೆ ನಡೆಯುತ್ತದೆ.ಇದಕ್ಕಿಂತ ದೊಡ್ಡ ಭಾಗ್ಯ ಒಬ್ಬ ಮುಸ್ಲಿಂನಿಗೆ ಇನ್ನೇನು ಬೇಕು.. ಇಹ ಪರ ವಿಜಯ ಪ್ರತಿಯೊಬ್ಬ ಮುಸ್ಲಿಂನ ಗುರಿ. ಅದನ್ನು ಸಾಧಿಸಲು ಬಹುಮಾನ್ಯ ಸಮಸ್ತದ ಜೊತೆ ಪಯಣಿಸಬೇಕು. ಅಲ್ಲಾಹನು ಭಾಗ್ಯ ಕರುಣಿಸಲಿ (ಅಮೀನ್ )
ಸಮಸ್ತ ನವೋದ್ದಾನದ ಪರಿಪೂರ್ಣತೆಯ ನೂರುವರ್ಷಗಳನ್ನು ಪೂರೈಸುವ ಹೊಸ್ತಿಲಲ್ಲಿದೆ.. ಇದರ ಪಯಣದ ಸಾಧನೆಯ ಸಂಪೂರ್ಣ ಪಥವನ್ನು ಬಣ್ಣಿಸಲು ಅಸಾಧ್ಯ.ಮುಸ್ಲಿಂ ಉಸಿರಾಗಿ ಪವಿತ್ರ ಇಸ್ಲಾಮಿನ ಆದರ್ಶದ ರಕ್ಷಕನಾಗಿ ಸಮಸ್ತ ನಿಂತಿದೆ.. ಅಂತ್ಯದಿನದವರೆಗೂ ಒಂದಿಷ್ಟು ಚ್ಯುತಿ ಬಾರದೆ ಸಮಸ್ತ ನಿಲ್ಲಲಿದೆ.ಏಕೆಂದರೆ ಸಮಸ್ತ ಅಮೃತ, ಅಮೋಘ, ಅನಂತ..!