ಕರ್ನಾಟಕದ ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ಅಕ್ಷರ ಕ್ರಾಂತಿಯ ಬೀಜವನ್ನು ಬಿತ್ತಿ ಶಿಕ್ಷಣ, ಪ್ರಬೋಧನೆ ಮತ್ತು ಸಾಂತ್ವನವನ್ನು ಧ್ಯೇಯವಾಗಿರಿಸಿಕೊಂಡು, 2016ರ ಮೇ ತಿಂಗಳಲ್ಲಿ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಎಂಬ ಅಭಿಮಾನ ವಿದ್ಯಾ ಸಂಸ್ಥೆ ತಲೆಯೆತ್ತಿ ನಿಂತಿತು.
ಹಲವಾರು ಪಂಡಿತ ಶಿರೋಮಣಿಗಳ ನಿರ್ದೇಶನದ ಮೇರೆಗೆ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉಸ್ತಾದರ ನೇತೃತ್ವದಲ್ಲಿ ಪಾರಂಪರಿಕ ಧಾರ್ಮಿಕ ದರ್ಸ್ ವ್ಯವಸ್ಥೆಯೊಂದಿಗೆ ಈ ವಿದ್ಯಾಸಂಸ್ಥೆ ನವ ಮುನ್ನುಡಿ ಬರೆಯಿತು.
ಇಸ್ಲಾಮಿನ ಅರಿವಿನ ಮಾಧುರ್ಯ ಅರಿಯದ ಮಕ್ಕಳಿಗೆ ವಿದ್ಯೆಯ ಮಧುರವನ್ನು ಉಣಿಸುತ್ತಾ ಬಂದು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತರ್ಬಿಯತ್ ಹಾಗೂ ತಝ್ ಕಿಯತನ್ನು ಬೋಧಿಸುತ್ತ ದಾರುಸ್ಸಲಾಂ ನವ ಚೈತನ್ಯದ ಹೆಜ್ಜೆ ಇಟ್ಟು ಇದೀಗ 8ನೇ ವಾರ್ಷಿಕೋತ್ಸವದ ಹೊಸ್ತಿಲಲ್ಲಿದೆ. ಅಷ್ಟ ಸಂವತ್ಸರದ ಕ್ರಾಂತಿ ಅಷ್ಟ ದಿಕ್ಕಿನತ್ತ ಮುಟ್ಟುತ್ತಿದೆ.
ಇದೇ ಬರುವ ನವೆಂಬರ್ 1 ರಂದು ಪಾಂಡಿತ್ಯ ಸಾಗರದಲ್ಲಿ ಪ್ರಜ್ವಲಿಸಿ ನಿಂತ ಮಹಾನ್ ನೇತಾರ ಆಲಿಮುಲ್ ಆಲಂ ಶೈಖುನಾ ಶಂಸುಲ್ ಉಲಮಾ ಸ್ಮರಣಾರ್ಥ ಉರೂಸ್ ಮುಬಾರಕ್ ಹಾಗೂ ಮಜ್ಲಿಸುನ್ನೂರ್ ವಾರ್ಷಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.