ದಾಂಪತ್ಯವನ್ನು ಉಳಿಸಿದ ಶೈಖುನಾರ ಬುದ್ಧಿಮತ್ತೆ

     ನೀನು ನಿನ್ನ ತಂದೆಯ ಮನೆಗೆ ಹೋಗಬಾರದು. ಹಾಗೆ ಮಾಡಿದರೆ ನಿನಗೆ ಮೂರು ತಲಾಖ್‌ಗಳನ್ನು ಹೇಳಲಾಗುತ್ತದೆ. ವಿದೇಶಕ್ಕೆ ಹೋಗುತ್ತಿದ್ದ ಗಂಡ ತನ್ನ ಹೆಂಡತಿಗೆ ಹೇಳಿದನು…ತಿಂಗಳು ಕಳೆಯಿತು … ಆ ಹುಡುಗಿಯ ತಂದೆಗೆ ರೋಗ ಬಂದು ಅಸ್ವಸ್ಥರಾದರು.ಆ ಮಗಳು ತನ್ನ ತಂದೆಯನ್ನು ಭೇಟಿನೀಡಲು ಹೋಗಲಿಲ್ಲ. ಗಂಡನ ಆದೇಶವನ್ನು ಪಾಲಿಸಿಕೊಂಡಳು. 

ಮತ್ತೆ ಕೆಲವು ದಿನಗಳ ನಂತರ ಅವಳ ತಂದೆ ಮರಣಹೊಂದಿದರು.ಅವಳಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ತಂದೆಯ ಜನಝ ನೋಡಲೇಬೇಕೆಂದು .ಆ ಮಗಳೊಬ್ಬಳ ಮಡುಗಟ್ಟಿದ ದುಃಖ ಕೊನೆಗೂ ತನ್ನ ತಂದೆಯ ಜನಝವನ್ನು ನೋಡಲು ಆ ಮನೆಗೆ ಹೋದಳು.
ಅವಳು ವಿಚ್ಛೇದನ ಪಡೆದಿದ್ದಾಳೆ ಎಂದು ಜನರು ತೀರ್ಪು ನೀಡಿದರು. ಸಂಬಂಧಪಟ್ಟವರು ಆಲಿಮರನ್ನು ಮತ್ತು ಖಾಲಿಯರನ್ನು ಸಂಪರ್ಕಿಸಿದರು.
ಮೂರು ತಲಾಖ್ ಪೂರ್ತಿಯಾಯಿತು ಎಂದು ಅವರೆಲ್ಲರೂ ತೀರ್ಪುಗಳನ್ನು ಬರೆದರು.

     ಶಂಸುಲ್ ಉಲಮಾರ ಫತ್ವ ಕೇಳಲು ಸಂಬಂಧಪಟ್ಟವರು ಶೈಖುನಾರ ಶಿಷ್ಯರೊಬ್ಬರಲ್ಲಿ ಆಗ್ರಹಿಸಿದರು. ಅವರು ಶಂಸುಲ್ ಉಲಮಾರನ್ನು ಸಂಪರ್ಕಿಸಿದರು.ನಡೆದ ಘಟನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.ಎಲ್ಲವನ್ನೂ ಕೇಳಿದ ಆ ಪಂಡಿತ ಸೂರ್ಯರ ಉತ್ತರ. ತಹ್ ಖಿಕಿನ ಜಗತ್ತಲ್ಲಿ ಬೆಚ್ಚಿಬಿಳಿಸುವಂತಹ ಉತ್ತರವಾಗಿತ್ತು .’ಅವಳು ವಿಚ್ಛೇದನೆ ಪಡೆದಿಲ್ಲ’ ಕಾರಣ ಆ ಪಂಡಿತ ಸೂರ್ಯರೇ ಸ್ವತಃ ಹೇಳಿದರು :’ಮರಣಹೊಂದಿದಾಗ ಅವಳು ಹೋಗಿದ್ದು ತಂದೆಯ ಮನೆಗೆ ಅಲ್ಲ. ತಂದೆ ತೀರಿಹೋದಾಗ ಅವರ ಮನೆ, ಆಸ್ತಿ ಎಲ್ಲವೂ ಮಕ್ಕಳ ಪಲಾಗಿದೆ ‘.ಅಲ್ಲಿಯವರೆಗೆ ಉತ್ತರಿಸಿದ ಯಾರು ಊಹಿಸಲಾಗದ ತಹ್ ಖಿಕಿನ ಉತ್ತರವಾಗಿತ್ತು.

Leave a Comment

Your email address will not be published. Required fields are marked *

Scroll to Top