ಶೈಖುನಾ ಶಂಸುಲ್ ಉಲಮಾ ರವರು ಬಾಂಬೈಯಿಂದ ವಿಮಾನದಲ್ಲಿ ಹೊರಡಲು ತಯಾರಾದರು. ಬೋರ್ಡಿಂಗ್ ಪಾಸೆಲ್ಲ ಸರಿಪಡಿಸಿ ವಿಮಾನ ಹತ್ತಿದರು. ಸುಬುಹಿ ನಮಾಝಿನ ಸಮಯದ ಮುಂಚೆಯೇ ಅವರು ವಿಮಾನ ನಿಲ್ದಾಣಕ್ಕೆ ಹೊರಟಿದ್ದರು.
ಶೈಖುನಾ ಶಂಸುಲ್ ಉಲಮಾ ಮತ್ತು ಇನ್ನಿತರರು ಏರ್ಪೋರ್ಟ್ ನಲ್ಲಿ ನಮಾಝ್ ನಿರ್ವಹಿಸಿದ್ದರು. ಸಹಾಯತ್ರಿಕರಾದಂತಹ ಕಾರ್ಯಕರ್ತನಲ್ಲಿ ಕೇಳಿದರು: “ನೀವು ನಮಾಝ್ ನಿರ್ವಹಿಸಿದ್ದೀರೇನು? “ನಮಾಝ್ ನಿರ್ವಹಿಸಿಲ್ಲ” ಎಂಬ ಉತ್ತರ ಕೇಳಿದಾಗಲೇ ವಿಮಾನದ ಒಳಗೆಯೇ ನಮಾಝ್ ನಿರ್ವಹಿಸಲು ಶೈಖುನಾರು ಆದೇಶಿಸಿದರು. ಕಾರ್ಯಕರ್ತ ಅದೇ ರೀತಿ ಮಾಡಿದ. “ನಮಾಝಿನ ಸಮಯದ ಮಹತ್ವವನ್ನು ಪರಿಗಣಿಸಿ, ಅದೇ ಸಮಯದಲ್ಲಿ ನಮಾಝ್ ನಿರ್ವಹಿಸಲೇಬೇಕು” ಎಂದು ಶೈಖುನಾ ಶಂಸುಲ್ ಉಲಮಾ ರವರು ಖಡಕ್ ತಾಕೀತು ಮಾಡಿದರು.
WhatsApp
Facebook
X
Threads