ಸಲಾಹುದ್ದೀನ್ ಕಡಬ
ಖ್ಯಾತ ಯುವ ಬರಹಗಾರ
ಪ್ರವಾದಿ(ಸ.ಅ) ಇತಿಹಾಸದಲ್ಲೇ ಸರಿಸಾಟಿಯಿಲ್ಲದ ಸದ್ಗುಣವಂತ ವ್ಯಾಪಾರಿಯಾಗಿದ್ದರು ಎಂಬುವುದರಲ್ಲಿ ಯಾರಿಗೂ ಯಾವುದೇ ಸಂದೇಹವಿಲ್ಲ. ಆದರೆ, ಅದೇ ಮಾದರಿಯನ್ನು ಹಿಂಬಾಲಿಸುವ ಪ್ರಜ್ಞಾವಂತ ಅನುಚರರು 20 ನೇ ಶತಮಾನದಲ್ಲೂ ಬದುಕಿದರೆನ್ನುವುದು ಒಂದು ಅತ್ಯಾಶ್ಚರ್ಯಕರ ಸಂಗತಿಯೇ. ಅಂತಹ ಅನನ್ಯ ವ್ಯಕ್ತಿತ್ವದಿಂದ ಹೆಸರುವಾಸಿಯಾಗಲು ಸೌಭಾಗ್ಯ ದೊರಕಿದ್ದು ಕಣ್ಣಿಯ್ಯತ್ ಎಂಬ ಒಂದು ಕೇವಲ ಕುಗ್ರಾಮಕ್ಕಾಗಿತ್ತು. ಕಣ್ಣಿಯ್ಯತ್ ಅಹ್ಮದ್ ಮುಸ್ಲಿಯಾರ್ ರವರು ತನ್ನ ಧಾರ್ಮಿಕ ಕಲಿಕೆ ಪೂರ್ತೀಕರಿಸಿ ಮರದ ವ್ಯಾಪಾರವನ್ನಾರಂಭಿಸಿದರು. ಆದರೆ ಎಲ್ಲಾ ವಿಚಾರಗಳಲ್ಲೂ ಸತ್ಯಹಾದಿಯಲ್ಲೇ ಸಾಗಿ ಅನುಭವವಿರುವ ಉಸ್ತಾದರು ತನ್ನ ವ್ಯಾಪಾರದಲ್ಲೂ ಅದೇ ಮಾರ್ಗವನ್ನು ಹಿಂಬಾಲಿಸಿದರು. ಆದರಿಂದ ಮರದ ವ್ಯಾಪಾರವು ಯಶಸ್ವಿಯಾಗುವುದರಲ್ಲಿ ವಿಫಲವಾಯಿತು. ಏಕೆಂದರೆ ಖರೀದಿದಾರರು ಬಂದು ಮರದ ಗುಣಮಟ್ಟವನ್ನು ವಿಚಾರಿಸಿದರೆ ಅವರು ಅದರಲ್ಲಿ ಅಡಗಿದ್ದ ಕೊರತೆಗಳನ್ನು ಕೂಡ ಯಾವುದೇ ಮುಲಾಜಿಯಿಲ್ಲದೆ ಸ್ಪಷ್ಟಪಡಿಸಿದರು. ಇದನ್ನು ಮುಂದುವರೆಸಿದರೆ ಜೀವನ ಮುಂದುವರೆಸಲು ಅಸಾಧ್ಯವೆಂದು ತಿಳಿದ ಉಸ್ತಾದರ ಮಿತ್ರರು ತಮ್ಮನ್ನು ಧಾರ್ಮಿಕ ಅಧ್ಯಾಪನಕ್ಕೆ ಕರೆತಂದರು. ಅಲ್ಲಾಹನು ಉಸ್ತಾದರ ವ್ಯಾಪಾರವನ್ನು ಯಶಸ್ವಿಗೊಳಿಸಿದ್ದರೆ ಸಮುದಾಯಕ್ಕೆ ಅದೊಂದು ನಿಭಾಯಿಸಲಾಗದಂತ ತೀವ್ರನಷ್ಟವಾಗುತ್ತಿತ್ತು. ಆದರೆ ಅಲ್ಲಾಹನು ಸಮುದಾಯವನ್ನು ತನ್ನ ಜೀವನದಲ್ಲಿ ಒಂದೇ ಒಂದು ಕರಾಹತ್ ಕೂಡ ಮಾಡದ ಕಣ್ಣಿಯ್ಯತ್ ರವರಿಂದ ಅನುಗ್ರಹಿಸಿದನು. ಉಸ್ತಾದರು ತನ್ನ ವ್ಯಾಪಾರದ ಹಾಗೆಯೇ ಪೂರ್ತಿ ಜೀವನದಲ್ಲೂ ಸಂಪೂರ್ಣ ಸೂಕ್ಷ್ಮತೆಯನ್ನು ಅಳವಡಿಸಿದರೆಂದು ತಿಳಿಸುವ ಅನೇಕ ಘಟನೆಗಳು ನಮ್ಮ ಮುಂದಿದೆ.
ಉಸ್ತಾದರು ಸಮಸ್ತ ಅಧ್ಯಕ್ಷರಾಗಿದ್ದಂತಹ ಕಾಲದಲ್ಲಿ ಒಂದು ದಿನ ಸಮಸ್ತ ಮುಶಾವರ ಸಂಗಮವು ಮುಗಿಸಿ ಅವರು ಅಧ್ಯಾಪನ ನಡೆಸಿದ್ದಂತಹ ವಾಝಕ್ಕಾಡ್ ಎಂಬ ಊರಿಗೆ ಬಸ್ ಹತ್ತಲು ಕಾಯುತ್ತಿರುವಾಗ ಅವರ ಕೈಯಲ್ಲಿ ಟಿಕೆಟ್ ಪಡೆಯುವ ಸಂಖ್ಯೆಯಲ್ಲದೆ ಒಂದು ನಾಣ್ಯ ಕೂಡ ಅಧಿಕವಾಗಿ ತನ್ನಲ್ಲಿರಲಿಲ್ಲ. ಆ ವೇಳೆ ಓರ್ವ ಭಿಕ್ಷುಕ ಉಸ್ತಾದರ ಬಳಿ ಬಂದು ಬೇಡಿದಾಗ ಉಸ್ತಾದರು ತನ್ನಲ್ಲಿದ್ದ ಆ ಕೇವಲ ನಾಣ್ಯವನ್ನು ಆ ಭಿಕ್ಷುಕನಿಗೆ ನೀಡಿ ಸುಮಾರು ದೂರ ನಡೆದುಕೊಂಡೇ ತನ್ನ ಊರಿಗೆ ತಲುಪುವಷ್ಟರಲ್ಲಿ ವಿದ್ಯಾರ್ಥಿಗಳೆಲ್ಲರು ಮಲಗಿದ್ದರು. ಆದರೆ ತನ್ನ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬ ವ್ಯಕ್ತಿ ಉಸ್ತಾದರನ್ನು ಕಾಯುತ್ತಲೇ ಆಹಾರ ಮಾಡದೆ ಕುಳಿತಿದ್ದರು. ಇದನ್ನು ನೋಡಿ ಉಸ್ತಾದರು ಅವನಲ್ಲಿ ಇವತ್ತು ನನಗೆ ಆಹಾರ ಬೇಡ, ನೀನು ತಿಂದು ಮಲಗು ಎಂದರು. ತುಂಬಾ ದೂರದಿಂದ ನಡೆದು ಬಂದು ಸುಸ್ತಾಗಿದ್ದ ಉಸ್ತಾದರ ಸಮಸ್ಯೆಯನ್ನು ಸೇವಕ ವಿಚಾರಿಸಿದನು. ಉಸ್ತಾದರು ಹೇಳಿದರು: ಇಲ್ಲಿ ಬರುವ ಆಹಾರ ಅಧ್ಯಾಪನ ನಡೆಸುವ ಕಣ್ಣಿಯ್ಯತ್ ಅಹ್ಮದ್ ರಿಗೆ, ಆದರೆ ನಾನು ಇವತ್ತು ಅಧ್ಯಾಪನ ನಡೆಸದ ಕಾರಣ ನನಗೆ ಇವತ್ತಿನ ಉಣಿಸು ಹಲಾಲ್ ಆಗುವುದಿಲ್ಲ, ನೀನು ನಿನ್ನ ಕೆಲಸ ನಿರ್ವಹಿಸಿದ ಕಾರಣ ನಿನಗೆ ಹಲಾಲ್ ಆಗಿದೆ, ಆದ ಕಾರಣ ನೀನು ಹೋಗಿ ತಿನ್ನು ಎಂದು ಹೇಳಿದಾಗ ಉಸ್ತಾದರು ತಿನ್ನದೇ ನಾನು ತಿನ್ನಲಾರೆಂದು ಹೇಳಿ ಮಲಗಲು ಹೊರಟಿದ. ಆವಾಗ ತನ್ನ ಕಾರಣದಿಂದಾಗಿ ತನ್ನ ಸೇವಕ ಹಸಿದವನಾಗಿ ಮಲಗಬಾರದೆಂದು ಅನಿಸಿ ಉಸ್ತಾದರು ವಿದ್ಯಾರ್ಥಿಗಳನ್ನು ಕರೆಸಿ ಅವರಿಗೆ ಪಾಠ ಮಾಡಿದ ಬಳಿಕವೇ ಆಹಾರ ಮಾಡಿದರು. ಇಲ್ಲಿ ವಿವರಿಸಲಾದ ಈ ಕೇವಲ ಒಂದು ದಿನದ ಘಟನೆಯಲ್ಲೇ ಹಲವು ರೀತಿಯಲ್ಲಿ ಉಸ್ತಾದರು ತೋರಿಸಿದ ಸೂಕ್ಷ್ಮತೆ ಹಾಗೂ ಪ್ರಾಮಾಣಿಕತೆ ಎಷ್ಟರ ಮಟ್ಟಿಗೆ ಇತ್ತು ಎಂಬ ವಿಚಾರ ನಮಗೆ ಅರ್ಥೈಸಬಹುದಾಗಿದೆ. ಉಸ್ತಾದರ ಅತೀ ದೊಡ್ಡ ಕರಾಮತ್ತು ಎನ್ನುವುದು ಉಸ್ತಾದರು ಪಾಲಿಸಿದ ಧರ್ಮನಿಷ್ಠೆ ಹಾಗೂ ಭಯಭಕ್ತಿಯಾಗಿತ್ತು. ಅದೇ ರೀತಿ ಉಸ್ತಾದರ ಅಸಾಮಾನ್ಯ ಪ್ರಾರ್ಥನೆಯ ವಿಶೇಷತೆಯ ಕುರಿತು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ ಎಂದು ಅನಿಸುತ್ತದೆ.
ತನ್ನ ಧಾರ್ಮಿಕ ಪ್ರಬುದ್ಧತೆ ಹಾಗೂ ಶೈಕ್ಷಣಿಕ ಸಾಮರ್ಥ್ಯದಿಂದ 26 ನೇ ವಯಸ್ಸಿನಲ್ಲಿ ಸಮಸ್ತ ಮುಶಾವರ ಸದಸ್ಯರಾಗಿ ಆರಿಸಲ್ಪಟ್ಟ ಉಸ್ತಾದರು ತನ್ನ ಕೊನೆಯುಸಿರಿನ ವರೆಗೂ ತನ್ನ ಧಾರ್ಮಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಅತೀವ ಸೂಕ್ಷ್ಮತೆಯನ್ನು ಹಾಗೂ ನೈಜ ಆದರ್ಶವನ್ನು ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿ ಸಮುದಾಯ ಸೇವೆಯಲ್ಲಿ ತಲ್ಲೀನರಾದರು. ತನ್ನ ಜೀವನದ ಕೊನೆಯ ಕ್ಷಣದಲ್ಲಿ ಉಸ್ತಾದರನ್ನು ಅನಾರೋಗ್ಯದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆವಾಗ ಉಸ್ತಾದರು ಮಲಗುತ್ತಿದ್ದ ಪರಿಸ್ಥಿತಿಯಲ್ಲಿ ಎಡಭಾಗಕ್ಕೆ ಉಗುಳಲು ಸಾಧ್ಯವಾಗುತ್ತಿರಲಿಲ್ಲ. ಆದರಿಂದ ಉಸ್ತಾದರು ಅದನ್ನು ತನಗೆ ಬೇಕಾದ ರೀತಿಯಲ್ಲಿ ಮಾಡಿಕೊಡಲು ಹೇಳಿದರು. ಎಡಭಾಗಕ್ಕೆ ಉಗುಳುವುದು ಶರೀಅತಿನಲ್ಲಿ ಹರಾಂ ಅಲ್ಲ, ಆದರೆ ಅದು ಕರಾಹತ್ ಆಗಿದೆಂಬ ಒಂದೇ ಕಾರಣಕ್ಕಾಗಿತ್ತು ಉಸ್ತಾದರು ಆ ರೀತಿ ಹೇಳಿದ್ದು. ಇನ್ನು ಉಸ್ತಾದರಿಗೆ ಉಗುಳುವಿಕೆ ಬಂದರೆ ಒಂದು ದಿನವೆಲ್ಲ, ಹಲವಾರು ವರ್ಷಗಳು ಕಾಯಬೇಕಾಗಿ ಬಂದರು ಸಹ ಉಸ್ತಾದರು ಬಲಭಾಗಕ್ಕೆ ಉಗುಳಲಾರೆಂದು ತಿಳಿದ ಮಿತ್ರರು ತಕ್ಷಣವೇ ತನ್ನ ಮಂಚವನ್ನು ಉಸ್ತಾದರು ಹೇಳಿದ ರೀತಿಯಲ್ಲಿ ಮಾಡಿಕೊಟ್ಟರು. ಇದಾಗಿತ್ತು ಉಸ್ತಾದರು ಪ್ರಪಂಚಕ್ಕೆ ತೋರಿದ ಪ್ರವಾದಿ ಪಾಠವನ್ನು ಹೊಂದಿದ ಅತ್ಯುತ್ತವ ಜೀವನ ರೀತಿ.
ಅತೀ ಹೆಚ್ಚು ಕಾಲ ಸಮಸ್ತ ಮುಶಾವರ ಸದಸ್ಯರಾಗಿ ಸೇವೆಗೈಯ್ಯುವ ಸೌಭಾಗ್ಯವು ಉಸ್ತಾದರಿಗೆ ದೊರಕಿತು. ಅಲ್ಲಾಹನು ನಮ್ಮನ್ನು ಈ ಮಹಾನರೊಂದಿಗೆ ಅವನ ಜನ್ನಾತುಲ್ ಫಿರ್ದೌಸಿನಲ್ಲಿ ಒಗ್ಗೂಡಿಸಲಿ🤲