ಯೂಸುಫ್ ಸವಾದ್ ಫೈಝಿ ಅಲ್ ಮಅ್ಬರಿ ಪರ್ಪುಂಜ
ಖ್ಯಾತ ಯುವ ಬರಹಗಾರ
1926 ಬಹುಮಾನ್ಯ ಸಮಸ್ತ ಸ್ಥಾಪಿತಗೊಂಡ ಸಂದರ್ಭದಲ್ಲೇ ಅದರ 40 ಮುಶಾವರ ಸದಸ್ಯರ ಪೈಕಿ ಒಬ್ಬರು ಈ ಮಹಾನರು. ಜೀವನದಲ್ಲಿ ಒಂದು ಕರಾಹತ್ ಕೂಡ ಮಾಡದ ಮಹಾಸಾತ್ವಿಕ. ಬಹುಮಾನ್ಯ ಸಮಸ್ತವು ಪ್ರತಿರೋಧದ ಸರಮಾಲೆಗಳನ್ನು ಎದುರಿಸಿದ ಸಮಸ್ತದ ಸುವರ್ಣ ಕಾಲದಲ್ಲಿ ಅಧ್ಯಕ್ಷ ಪದವಿಯಲ್ಲಿ ಕುಳಿತು ಬಹುಮಾನ್ಯ ಸಮಸ್ತವನ್ನು ಸಮರ್ಥವಾಗಿ ನಿಭಾಯಿಸಿದವರು. ಇವರ ಪ್ರಧಾನ ಶಿಷ್ಯರಾಗಿದ್ದಾರೆ ಶೈಖುನಾ ಶಂಸುಲ್ ಉಲಮಾ ರವರು. ಬಹುಮಾನ್ಯ ಸಮಸ್ತ ಏನು ಎಂದು ತಿಳಿಯಲು ಬಯಸುವವರು ಇವರ ಆಧ್ಯಾತ್ಮಿಕತೆ ಮತ್ತು ಸೂಕ್ಮತೆ ತುಂಬಿದ ಜೀವನವನ್ನು ಕಲಿತರೆ ಸಾಕು. ಅಷ್ಟಕ್ಕೂ ಧಾರ್ಮಿಕ ಪರಿಜ್ಞಾನ ಮತ್ತು ಭಕ್ತಿ ಹೊಂದಿದ ನಿಸ್ವಾರ್ಥ,ನಿಷ್ಕಳಂಕ ಮತ್ತು ನಿಷ್ಕಪಟರಿವರು.
ಇವರು ನಡೆದು ಬಂದ ಹಾದಿಯೇ ಸರಿಯಾದ ಹಾದಿ ಎಂದು ಮನದಟ್ಟಾಗಲು ಅಲ್ಲಾಹನು ಹಲವಾರು ನಿದರ್ಶನಗಳನ್ನು ಮುಂದಿಟ್ಟಿದ್ದಾನೆ. ಆ ಪೈಕಿ ಅತ್ಯಂತ ವಿಸ್ಮಯವಾದಂತಹ ನಿದರ್ಶನವಾಗಿದೆ 26 ಎನ್ನುವುದು!!!
ಅಷ್ಟಕ್ಕೂ.. ಏನಿದು 26!!!
ಇದೊಂದು ಸಂಖ್ಯಾ ಪವಾಡ. ಪರಿಶುದ್ಧ ಕುರಾನಿನಲ್ಲಿ ಹಲವೆಡೆ ಸಂಖ್ಯಾಪವಾಡಗಳಿವೆ. ಅದರಂತೆಯೇ ಇದೂ ಕೂಡ.
ಆ ಕಡೆ ಒಮ್ಮೆ ಮೆಲುಕು ಹಾಕೋಣ.
ಬಹುಮಾನ್ಯ ಸಮಸ್ತ ಸ್ಥಾಪನೆಗೊಂಡದ್ದು 1926 ರಲ್ಲಾಗಿತ್ತು. ಅದು ಜೂನ್ ತಿಂಗಳ 26ರಂದಾಗಿತ್ತು. ಶೈಖುನಾರು ಸಮಸ್ತದ 26ನೆಯ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಅಂದು ಅವರ ವಯಸ್ಸು 26. ಹೀಗೆ ಎಲ್ಲವೂ 26. ಬಹುಮಾನ್ಯ ಸಮಸ್ತ ಮತ್ತು ಶೈಖುನಾರ ನಡುವೆ ಈ 26ಕ್ಕೆ ಬಹಳಷ್ಟು ನಂಟು ಇದೆ. ತರುವಾಯ ಅವರ ಪರಲೋಕ ಯಾತ್ರೆಗಿಂತ ಮುಂಚೆ ಮಗದೊಂದು 26ನ್ನು ಸೂಚಿಸಿ ಯಾತ್ರೆಯಾಗಿದ್ದರು. ಅದು ತಾನು ಅಧ್ಯಕ್ಷನಾಗಿದ್ದ ಕಾಲಾವಧಿಯಾಗಿತ್ತು. ಇವರು 1989 ರಲ್ಲಿಯೂ ಅದರ ಮುಂಚೆಯೂ, ಬಳಿಕವೂ ಅಧ್ಯಕ್ಷರಾಗಿ ಇದ್ದವರು. 1967 ರಿಂದ 1993 ರ ವರೆಗಿನ ಇವರ ಕಾಲಾವಧಿ 26. ಬಹುಮಾನ್ಯ ಸಮಸ್ತದ ಪ್ರಾರಂಭ ಕಾಲದಲ್ಲಿದ್ದ 26 ಮತ್ತು ಅಲ್ಲಾಹನ ರಹ್ಮತ್ತಿಗೆ ಯಾತ್ರೆಯಾದ ಸಂದರ್ಭದಲ್ಲಿ ಇದೇ ಸತ್ಯ ಎಂದು ತೋರಿಸುವುವ 26. ಇದರಲ್ಲಿ ಚಿಂತಿಸುವವರಿಗೆ ನಿದರ್ಶನಗಳಿಗೆ.
ಅವರ ವಫಾತ್ ಈ ಲೋಕಕ್ಕೆ ಹೇಳದೇ ಹೇಳಿದಂತಹ ಒಂದು ಸಂದೇಶವಿತ್ತು. ಅದು ಇದಾಗಿದೆ, “1926 ರ ಜೂನ್ 26 ರಲ್ಲಿ ಸ್ಥಾಪಿತಗೊಂಡು, 26 ನೇ ವಯಸ್ಸಲ್ಲಿ 26ನೇ ಸದಸ್ಯನಾಗಿ ಆಯ್ಕೆಯಾದ, 26 ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಈ ಹಾದಿಯೇ ಸತ್ಯ. ಇದು ಮಾತ್ರವೇ ಸತ್ಯ…!!!”
#ಚಿಂತಿಸುವವರಿಗೆ_ನಿದರ್ಶನಗಳಿವೆ