ಸಮಸ್ತದ ಗುರಿ ಶರೀಅತ್ತಿನ ಸಂರಕ್ಷಣೆಯಾಗಿದೆ. ಇದು ಸ್ಥಾಪಿತಗುರಿಯಿಂದ ಹಿಡಿದು ಇಂದಿನ ವರೆಗೂ ನಿರ್ವಹಿಸುತ್ತಾ ಬಂದಿದೆ. ಹದಿನಾಲ್ಕು ಉಪ ಸಂಘಟನೆ ಹಾಗೂ ಅನೇಕ ಸ್ಥಾಪನೆಗಳನ್ನು ಕಳೆದ ನೂರು ವರ್ಷಗಳಲ್ಲಿ ಸ್ಥಾಪಿಸಿರುವುದು ಇಸ್ಲಾಮಿನ ಶರೀಅತಿನ ಸಂರಕ್ಷಣೆಗೆಯಾಗಿದೆ. ಇದರೊಂದಿಗೆ ಸಮುದಾಯಗಳ ನಡುವಿರುವ ಬಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಇಸ್ಲಾಮಿನ ಚೌಕಟ್ಟಲ್ಲಿ ಸಂಬಂಧ ಬೆಳೆಸಲು ಸಮಸ್ತ ನಡೆಸಿದ ಚಟುವಟಿಕೆಗಳು ಬಹಳ ಗಮನಾರ್ಹವಾಗಿದೆ . ಪ್ರಾಥಮಿಕ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳಂತಹ ಧಾರ್ಮಿಕ ಮತ್ತು ದೈಹಿಕ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿ ಚಾರಿಟಿಯಂತಹ ಕೆಲಸಗಳು ಎಲ್ಲಾ ಕ್ಷೇತ್ರದಲ್ಲಿ ನಡೆಸುವುದು ಪ್ರಸಂಶನೀಯ ಕಾರ್ಯವಾಗಿದೆ.
“ವಯನಾಡಿನಲ್ಲಿ ನಡೆದ ದುರಂತದ ಸಂದರ್ಭದಲ್ಲಿ ಸಮಸ್ತ ಪಕ್ಷ ಜಾತಿ ಬೇಧವಿಲ್ಲದೆ ಎಲ್ಲರಿಗೂ ಸಹಾಯ ಮಾಡಿದೆ.ಅಹ್ಲುಸುನ್ನತಿ ವಲ್ ಜಮಾಅತ್ ಪರಿಕಲ್ಪನೆಯೊಂದಿಗೆ ಸಮಸ್ತ ಈ ದೇಶದಲ್ಲಿ ಸೌಹಾರ್ದ, ಅನ್ಯೋನ್ಯತೆಯನ್ನು ಸೃಷ್ಟಿಸಿ ಸಮಾಜವನ್ನು ಮುನ್ನಡೆಸಿದೆ.ಇಸ್ಲಾಂ ಧರ್ಮವು ಪ್ರೀತಿ ಮತ್ತು ಸಹನೆಯನ್ನು ಕಲಿಸುವ ಧರ್ಮವಾಗಿದೆ. ಆದ್ದರಿಂದಲೇ ಸಮಸ್ತದ ನಿಲುವು ಈ ಕೇರಳದ ಮಾದರಿಯನ್ನು ರಾಷ್ಟ್ರಮಟ್ಟಕ್ಕೆ ಹರಡಿಸುವ ಉದ್ದೇಶವಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಮಾಡಿರುವ ಕಾರ್ಯ ಶ್ಲಾಘನೀಯವಾಗಿದ್ದು, 5ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಆಶಾದಾಯಕವಾಗಿದೆ ಎಂದು ಹೇಳಿದರು.